ಶ್ವಾಸಕೋಶದ ಮೇಲೆ ತಂಬಾಕಿನ ಪ್ರಹಾರ: ಉಡುಪಿಯಲ್ಲಿ ವಿಶಿಷ್ಟ ಜಾಗೃತಿ ಕಲಾಕೃತಿ
ಉಡುಪಿ, ಜೂ.3: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗ ದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೇಬೆಟ್ಟು ರಚಿಸಿದ ವಿಶಿಷ್ಟತಂಬಾಕು ಜಾಗೃತಿ ಕಲಾಕೃತಿಯನ್ನು ಕೆಎಂಸಿ ಮಣಿಪಾಲದ ಇಲ್ಲಿನ ಡೀನ್ ಡಾ. ಪ್ರಜ್ಞಾ ರಾವ್ ಸೋಮವಾರ ಉಡುಪಿಯ ಕೆಎಸ್‌ಅರ್‌ಟಿಸಿ ಬ್ ನಿಲ್ದಾಣದಲ್ಲಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಎಂಐಟಿ ಉಪನ್ಯಾಸಕ ಬಾಲಕೃಷ್ಣ ಮುಡ್ದೋಡಿ, ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವಿಸುವವರನ್ನು ಕಂಡರೆ ಅವನ ಕೈಯಿಂದ ಅದನ್ನು ಕಿತ್ತೊಗೆಯಿರಿ ಎಂದರು. ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಸಿಬ್ಬಂದಿಗಳು ಸಾರ್ವಜನಿಕರಿಗೆ ತಂಬಾಕಿನ ದುಷ್ಪರಿಣಾಮದ ಬಗ್ಗೆ ಸಂದೇಶ ಸಾರುವ ಬೀದಿ ನಾಟಕ ಪ್ರದರ್ಶಿಸಲಾಯಿತು.
ಉಡುಪಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥೆ ಡಾ.ಸುಮ ನಾಯರ್, ಡಾ.ಮುರಳಿಧರ್ ಕುಲಕರ್ಣಿ, ರೋಟರಿ ಕ್ಲಬ್‌ನ ಯಶವಂತ್ ಬಿ.ಕೆ., ರಾಜವರ್ಮ ಅರಿಗ ಮತ್ತಿತರರು ಉಪಸ್ಥಿತರಿದ್ದರು. ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.





