ಆರೋಗ್ಯ ಅಧಿಕಾರಿ ಎಸಿಬಿ ಬಲೆಗೆ

ಬೆಂಗಳೂರು, ಜೂ.3: ಟ್ರೇಡ್ ಲೈಸನ್ಸ್ ನೀಡುವ ಸಲುವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಆರೋಗ್ಯ ಅಧಿಕಾರಿಯೊಬ್ಬರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ವಲಯ ಕಚೇರಿಯಲ್ಲಿ ಆರೋಗ್ಯ ಅಧಿಕಾರಿಯಾಗಿದ್ದ ಪ್ರದೀಪ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ನಗರದ ವ್ಯಕ್ತಿಯೊಬ್ಬರು ಸ್ನೂಕರ್ ಪಾರ್ಲರ್ ನಡೆಸಲು ಟ್ರೇಡ್ ಲೈಸನ್ಸ್ ಪಡೆಯುವ ಸಲುವಾಗಿ ಅರಕೆರೆ ಬಿಬಿಎಂಪಿ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಟ್ರೆಡ್ ಲೈಸೆನ್ಸ್ ನೀಡುವ ಸಲುವಾಗಿ ಆರೋಗ್ಯ ಅಧಿಕಾರಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ದೂರು ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಎಸಿಬಿ ತನಿಖಾಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
Next Story





