ಬಟ್ಲರ್ ಶತಕ

ನಾಟಿಂಗ್ ಹ್ಯಾಮ್, ಜೂ.4: ಇಂಗ್ಲೆಂಡ್‌ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಬಟ್ಲರ್ ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನ ಪಂದ್ಯದಲ್ಲಿ ಶತಕ ದಾಖಲಿಸಿದರು. ಬಟ್ಲರ್ 75 ಎಸೆತಗಳಲ್ಲಿ 9ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದರು. ಇದು ಅವರ 133ನೇ ಏಕದಿನ ಪಂದ್ಯದಲ್ಲಿ 9ನೇ ಶತಕವಾಗಿದೆ.
ಬಟ್ಲರ್ ಶತಕ ದಾಖಲಿಸಿದ ಬೆನ್ನಲ್ಲೇ ಅವರು ಮುಹಮ್ಮದ್ ಆಮಿರ್ ಎಸೆತದಲ್ಲಿ ವಹಾಬ್ ರಿಹಾಝ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಔಟಾಗುವ ಮುನ್ನ ಅವರು 103 ರನ್(76ಎ, 9ಬೌ, 2ಸಿ) ಗಳಿಸಿದರು. ಬಟ್ಲರ್ ಅವರದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಎರಡನೇ ಶತಕವಾಗಿದೆ. ಇದಕ್ಕೂ ಮೊದಲು ಅವರ ತಂಡದ ಸಹ ಆಟಗಾರ ಜೋ ರೂಟ್ ಶತಕ ದಾಖಲಿಸಿದ್ದರು.
Next Story





