ಕೇರಳ ಯುವಕನಿಗೆ ನಿಪಾಹ್ ವೈರಸ್ ಶಂಕೆ: ಆತಂಕಕ್ಕೊಳಗಾಗದಂತೆ ಸರಕಾರ ಮನವಿ

ಕೊಚ್ಚಿ, ಜೂ.3: ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಜ್ವರಪೀಡಿತನಾಗಿ ದಾಖಲಾಗಿರುವ ಯುವಕ ನಿಪಾಹ್ ವೈರಾಣು ಸೋಂಕಿಗೆ ಒಳಗಾಗಿರಬಹುದು ಎಂಬ ಅನುಮಾನವನ್ನು ಅಳಪ್ಪುಳದ ವೈರಾಣುಶಾಸ್ತ್ರ ಸಂಸ್ಥೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಧ್ಯ ಕೇರಳದ ಜನತೆ ಆತಂಕಕ್ಕೀಡಾಗಿದ್ದಾರೆ. ಈ ಕುರಿತು ವರದಿಗಾರರ ಜೊತೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು, ವೈರಾಣುಶಾಸ್ತ್ರ ಸಂಸ್ಥೆಯ ಪ್ರಾಥಮಿಕ ಪರೀಕ್ಷೆಯಲ್ಲಿ ಯುವಕನಿಗೆ ನಿಪಾಹ್ ವೈರಾಣು ಸೋಂಕಿರುವುದು ಪತ್ತೆಯಾಗಿದ್ದರೂ ಈ ಬಗ್ಗೆ ದೃಢೀಕರಣವನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯಿಂದ ಬರುವ ವರದಿಯ ನಂತರವೇ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜನರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಎಂದು ಮನವಿ ಮಾಡಿರುವ ಸಚಿವೆ, ಮತ್ತೊಂದು ಬಾರಿ ನಿಪಾಹ್ ರಾಜ್ಯದಲ್ಲಿ ಹರಡುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
Next Story





