ಈ ಬಾರಿ ರಮಝಾನ್ ನಲ್ಲಿ ಸ್ವಿಟ್ಝ್ ಸಮೋಸ ಪಟ್ಟಿಗೆ ಭಾರೀ ಬೇಡಿಕೆ : ಸಿಇಒ

ಮಂಗಳೂರು: ಈ ಬಾರಿ ರಮಝಾನ್ ನಲ್ಲಿ ಸ್ವಿಟ್ಝ್ ಇಂಟರ್ನ್ಯಾಷನಲ್ ನ ಸಮೋಸ ಪಟ್ಟಿ ಹಾಗು ಇತರ ಸಂಬಂಧಿತ ಉತ್ಪನ್ನಗಳು ಭಾರೀ ಬೇಡಿಕೆಯೊಂದಿಗೆ ಮಾರಾಟವಾಗಿ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದಿವೆ ಎಂದು ಸಂಸ್ಥೆಯ ಸಿಇಒ ಖುರೇಶ್ ಮಾಸ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ನಾವು ಪ್ರತಿ ಗೃಹಿಣಿಯರಿಗೆ ಈ ರಮಝಾನ್ ನಲ್ಲಿ ಇಫ್ತಾರ್ ತಯಾರಿ ಸುಲಭವಾಗುವಂತೆ ಮಾಡಿದ್ದೇವೆ ಎಂಬ ಹೆಮ್ಮೆಯಿದೆ. ಅಡುಗೆಯ ಒತ್ತಡ ಕಡಿಮೆ ಮಾಡಿ ಅವರು ಇನ್ನಷ್ಟು ಸೃಜನಶೀಲವಾಗಿ, ರುಚಿಕರವಾಗಿ ಸುಲಭವಾಗಿ ಖಾದ್ಯಗಳನ್ನು ತಯಾರಿಸಲು ನಮ್ಮ ಉತ್ಪನ್ನಗಳಿಂದ ಸಾಧ್ಯವಾಗಿದೆ ಎಂಬುದು ನಮಗೆ ಖುಷಿಯ ವಿಷಯ. ಈ ಬಾರಿ ಸಮೋಸ ಪಟ್ಟಿ ಜೊತೆಗೆ ಸ್ಪ್ರಿಂಗ್ ರೋಲ್ ಶೀಟ್ ಗಳು , ಫಿಲೋ ಪೇಸ್ಟ್ರಿ , ಪರಾಟ , ಪಫ್ ಪೇಸ್ಟ್ರಿ ಗಳನ್ನು ಸೇರಿಸಿದ್ದೆವು" ಎಂದು ಖುರೇಶ್ ಮಾಸ್ಟರ್ ಹೇಳಿದ್ದಾರೆ.
ಸ್ವಿಟ್ಝ್ ಗ್ರೂಪ್ ದುಬೈಯಲ್ಲಿ ಪ್ರಧಾನ ಕಚೇರಿಯಿರುವ ಕುಟುಂಬ ಮಾಲಕತ್ವದ ಆದರೆ ವೃತ್ತಿಪರ ಆಡಳಿತ ವ್ಯವಸ್ಥೆ ಇರುವ ಕಂಪೆನಿ ಸಮೂಹವಾಗಿದೆ. 9 ದೇಶಗಳಲ್ಲಿ 30ಕ್ಕೂ ಹೆಚ್ಚು ಕಾರ್ಖಾನೆಗಳಲ್ಲಿ ಈ ಕಂಪೆನಿಯ ಉತ್ಪನ್ನಗಳು ತಯಾರಾಗುತ್ತವೆ.
4500ಕ್ಕೂ ಹೆಚ್ಚು ಸಿಬ್ಬಂದಿಯಿರುವ ಸ್ವಿಟ್ಝ್ ತನ್ನ ಉತ್ಪನ್ನಗಳನ್ನು 30ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಈ ಸಮೂಹದ ಒಂದು ಯಶಸ್ವಿ ಅಂಗ ಸ್ವಿಟ್ಝ್ ಇಂಟರ್ನ್ಯಾಷನಲ್ ಇಂದು ಸಮೋಸ ಪಟ್ಟಿ ಮಾರಾಟದಲ್ಲಿ ಜಾಗತಿಕ ಟಾಪ್ ಕಂಪೆನಿಯಾಗಿ ಬೆಳೆದಿದೆ ಎಂದು ಪ್ರಕಟಣೆ ತಿಳಿಸಿದೆ.







