ಅಳೇಕಲ: ಸುನ್ನೀ ಸೆಂಟರ್ ವತಿಯಿಂದ ಈದ್ ಕಿಟ್ ವಿತರಣೆ

ಉಳ್ಳಾಲ: ಸುನ್ನೀ ಸೆಂಟರ್ ಅಳೇಕಲ ವತಿಯಿಂದ ಅಳೇಕಲ ಮತ್ತು ಉಳ್ಳಾಲ ಪರಿಸರದ ಸುಮಾರು 50 ಬಡ ಕುಟುಂಬಕ್ಕೆ ಈದ್ ಕಿಟ್ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಅಳೇಕಲದ ನಜಾತುಸ್ಸಿಬಿಯಾನ್ ಮದ್ರಸ ಹಾಲ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ದಅವಾ ಚೇರ್ಮಾನ್ ಝುಬೈರ್ ಝಹುರಿ ದುವಾ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅಳೇಕಲ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಯು.ಡಿ, ಫಾರೂಕ್ ಯು ಡಿ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ, ಆಸಿಫ್ ಉಸ್ತಾದ್, ಅಳೇಕಲ ಶಾಖೆಯ ಅಧ್ಯಕ್ಷ ಫಾಝಿಲ್ , ಕಾರ್ಯದರ್ಶಿಗಳಾದ ಜಾವಿದ್, ಶಫೀಖ್, ನಿಹಾಲ್ ಸಹಿತ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
Next Story





