ಎಸ್ಸೆಸ್ಸೆಫ್ ಉಡುಪಿ ಡಿವಿಷನ್: ರಂಝಾನ್ ಕಿಟ್ ವಿತರಣೆ
ಉಡುಪಿ, ಜೂ.4: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ತಾಜುಲ್ ಉಲಮಾ ರಿಲೀಫ್ ಸೆಲ್ ವತಿಯಿಂದ ಡಿವಿಷನ್ ವ್ಯಾಪ್ತಿಯ ಅರ್ಹ ಬಡ ಕುಟುಂಬ ಗಳಿಗೆ ಈದ್ ಕಿಟ್ ವಿತರಣೆ ರಝಾಕ್ ಉಸ್ತಾದ್ ಹೌಸ್ ಉಡುಪಿ ಇಲ್ಲಿ ನೀಡಲಾಯಿತು.
ಡಿವಿಷನ್ ಗೌರವ ಸಲಹೆಗಾರ ರಶೀದ್ ಉಸ್ತಾದ್ ಕಟಪಾಡಿ ಉದ್ಘಾಟಿಸಿ ದರು. ರಿಲೀಫ್ ಸಮಿತಿ ಅಧ್ಯಕ್ಷ ರಝಾಕ್ ಉಸ್ತಾದ್ ಅಂಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ರಿಲೀಫ್ ಸಮಿತಿ ಉಪಾಧ್ಯಕ್ಷ ಆಸೀಂ ದೊಡ್ಡಣಗುಡ್ಡೆ, ಜೊತೆ ಕಾರ್ಯದರ್ಶಿ ನವಾಝ್ ಉಡುಪಿ ಸಹಕರಿಸಿದರು.
ರಿಲೀಫ್ ಸೆಲ್ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿ, ವಂದಿಸಿದರು.
Next Story





