ಈದುಲ್ ಫಿತ್ರ್ ಶುಭ ಹಾರೈಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಬೆಂಗಳೂರು, ಜೂ.4: ಈದುಲ್ ಫಿತ್ರ್, ಅಂದರೆ ಮುಸ್ಲಿಮರು 30 ದಿನಗಳ ಉಪವಾಸದ ನಂತರ ಆಚರಿಸುವ ಈ ಹಬ್ಬಕ್ಕೆ ಇಸ್ಲಾಮಿನಲ್ಲಿ ಬಹಳ ಮಹತ್ವದ ಸ್ಥಾನವಿದೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ದೇಶದಲ್ಲಿ ಮತ್ತೊಮ್ಮೆ ‘ಮೋದಿ ಸರಕಾರ’ ರಚನೆಯಾಗಿದ್ದು, ಪ್ರಧಾನಿ ಹೇಳಿದಂತೆ ‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಮತ್ತು ಇದರ ಜೊತೆ ‘ಸಬ್ ಕಾ ವಿಶ್ವಾಸ್’ನೊಂದಿಗೆ ಎಲ್ಲರೂ ನಡೆದು ಕೂಡಿ ಬಾಳೋಣ ಮತ್ತು ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ಭಾರತ ಒಂದು ಭವ್ಯ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರವೆಂದು ತೋರಿಸೋಣ ಎಂದು ಯಡಿಯೂರಪ್ಪ ಶುಭ ಹಾರೈಸಿದ್ದಾರೆ.
Next Story





