ಅಕ್ರಮ ಮೀನುಗಾರಿಕೆಗೆ 2.5ಲಕ್ಷ ರೂ. ದಂಡ: ಸರಕಾರಕ್ಕೆ ಪ್ರಸ್ತಾವನೆ
ದೋಣಿ, ಮೀನುಗಾರಿಕಾ ಬಂದರುಗಳ ರಕ್ಷಣೆ ಕುರಿತು ಸಭೆ
ಉಡುಪಿ, ಜೂ.4: ಹೊರರಾಜ್ಯದ ದೋಣಿಗಳು ನಡೆಸುವ ಅಕ್ರಮ ಮೀನು ಗಾರಿಕೆ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದ್ದು, ಇಂತಹ ದೋಣಿಗಳ ವಿರುದ್ಧ 2.5 ಲಕ್ಷ ರೂ. ದಂಡ ವಿಧಿಸಲು ಸೂಕ್ತ ಆದೇಶ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾಶ್ವನಾರ್ಥ್ ತಿಳಿಸಿದ್ದಾರೆ.
ಕರಾವಳಿಯ ಮತ್ತು ಮೀನುಗಾರಿಕೆ ಸ್ಥಗಿತಗೊಂಡ ಸಮಯದಲ್ಲಿ ದೋಣಿಗಳ ಮತ್ತು ಮೀನುಗಾರಿಕಾ ಬಂದರುಗಳ ರಕ್ಷಣೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಧ್ಯಕ್ಷತೆಯಲ್ಲಿ ಜೂ.3ರಂದು ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸರಕಾರದ ಆದೇಶದಂತೆ ಮೀನುಗಾರಿಕಾ ದೋಣಿಗಳಿಗೆ ಕಲರ್ ಕೋಡಿಂಗ್ ಮಾಡಲಾಗುತ್ತಿದ್ದು, ಈಗಾಗಲೇ ಎಲ್ಲಾ ಯಾಂತ್ರೀಕೃತ ದೋಣಿಗಳಿಗೆ ಕಲರ್ ಕೋಡಿಂಗ್ ಮಾಡಲಾಗಿದೆ. ಶೇ.60ರಷ್ಟು ನಾಡದೋಣಿಗಳಿಗೆ ಕಲರ್ ಕೋಡಿಂಗ್ ಬಾಕಿ ಇದೆ ಎಂದು ಅವರು ಹೇಳಿದರು. ಮುಂದಿನ ಮೂರು ತಿಂಗಳೊಳಗೆ ಎಲ್ಲಾ ನಾಡ ದೋಣಿಗಳಿಗೂ ಕಲರ್ ಕೋಡಿಂಗ್ ಮಾಡುವು ದಾಗಿ ನಾಡದೆಣಿ ಸಂಘದ ಅಧ್ಯಕ್ಷರು ತಿಳಿಸಿದರು.
ಈಗಾಗಲೇ ಬಯೋಮೆಟ್ರಿಕ್ ಕಾರ್ಡ್ ಕೆಲವರಿಗೆ ವಿತರಿಸಲಾಗಿದ್ದು, ಅಪೂರ್ಣ ವಿಳಾಸದಿಂದ ಕೆಲವರಿಗೆ ವಿತರಣೆ ಮಾಡಿಲ್ಲ. ಬಾಕಿ ಉಳಿದ ಬಯೋಮೆಟ್ರಿಕ್ ಕಾರ್ಡ್‌ನ್ನು ಬೆಲ್ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ಮೀನುಗಾರಿಕಾ ಬಂದರುಗಳಲ್ಲಿ ಶಿಬಿರ ಏರ್ಪಡಿಸಿ ಎರಡು ತಿಂಗಳೊ ಳಗೆ ವಿತರಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ದೊಡ್ಡಮನಿ ತಿಳಿಸಿದರು.
ಪರಿಣಾಮಕಾರಿಯಾದ ಸಂವಹನ ನಡೆಸಲು ಮೀನುಗಾರಿಕಾ ದೋಣಿಗಳಲ್ಲಿ ಟ್ರಾನ್ಸ್‌ಪಾಂಡರ್‌ಗಳನ್ನು ಅಳವಡಿಸುವ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸ ಲಾಯಿತು. ಇವುಗಳ ಬೆಲೆ ದುಬಾರಿಯಾಗಿರುವುದರಿಂದ ಸರಕಾರದಿಂದ ಉಚಿತವಾಗಿ ಒದಗಿಸಬೇಕೆಂದು ಮೀನುಗಾರರ ಸಂಘದವರು ಮನವಿ ಮಾಡಿ ದರು. ಎಲ್ಲರೂ ಒಟ್ಟಾಗಿ ಅಳವಡಿಸಿದಲ್ಲಿ ಕಂಪೆನಿಗಳು ಬೆಲೆಯಲ್ಲಿ ಕಡಿತ ಮಾಡುತ್ತದೆ ಎಂದು ಪಾಶ್ವನಾರ್ಥ್ ತಿಳಿಸಿದರು.
ತಂಡದಿಂದ ಬಂದರಿನಲ್ಲಿ ಗಸ್ತು: ಬಂದರಿನಲ್ಲಿ ನಿಲ್ಲಿಸಲಾದ ದೋಣಿಗಳ ರಕ್ಷಣೆಗಾಗಿ ಮೀನುಗಾರಿಕಾ ಇಲಾಖೆ, ಕರಾವಳಿ ಕಾವಲು ಪಡೆ ಮತ್ತು ಮೀನುಗಾರರನ್ನು ಒಳಗೊಂಡ ತಂಡದೊಂದಿಗೆ ಗಸ್ತು ತಿರುಗುವ ಬಗ್ಗೆ ನಿರ್ಧರಿಸಲಾಯಿತು. ರಾತ್ರಿಯ ಗಸ್ತು ಪರಸ್ಪರ ಸಹಯೋಗದಿಂದ ನಿರ್ವಹಿಸ ಬೇಕು ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಪಾಯಿಂಟ್ ಪುಸ್ತಕ ಇಡುವಂತೆ ಸೂಚಿಸಲಾಯಿತು.
ಬೆಂಕಿ ಮತ್ತು ಇತರ ನೈಸರ್ಗಿಕ ಅವಘಡದ ಸಮಯದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗದಂತೆ ದೋಣಿಗಳನ್ನು ನಿಲ್ಲಿಸುವುದು ಮತ್ತು ಬಲೆಗಳನ್ನು ದಾರಿಯಲ್ಲಿ ಹಾಕದಂತೆ ಮೀನುಗಾರರ ಸಂಘಟನೆಯ ಅಧ್ಯಕ್ಷರಿಗೆ ತಿಳಿಸಲಾಯಿತು.
ಬಂದರಿನಲ್ಲಿ ನಿಲ್ಲಿಸಲಾದ ಮೀನುಗಾರಿಕಾ ದೋಣಿಗಳಲ್ಲಿ ಆಹಾರ ತಯಾ ರಿಸುವುದು, ಸಂಜೆ 6 ಗಂಟೆ ನಂತರ ಯಾವುದೇ ರಿಪೇರಿ ಕೆಲಸ, ವೆಲ್ಡಿಂಗ್ ಕೆಲಸಗಳನ್ನು ಮಾಡಬಾರದು. ನಿಲುಗಡೆಗೊಳಿಸಿದ ದೋಣಿಗಳಲ್ಲಿ ಅತ್ಯಲ್ಪ ಪ್ರಮಾಣದ ಇಂಧನವನ್ನು ಮಾತ್ರ ಇಡಲು ಮತ್ತು ಈ ದೋಣಿಗಳ ರಕ್ಷಣೆಗೆ ಖಾಸಗಿ ಸೆಕ್ಯೂರಿಟಿಗಳನ್ನು ಸೂಕ್ತ ಗುರುತು ಚೀಟಿ, ವಾಸ್ತವ್ಯ ದೃಡೀಕರಣ ಪತ್ರವನ್ನು ಪಡೆದು ನೇಮಿಸುವಂತೆ ದೋಣಿ ಮಾಲಕರ ಸಂಘಗಳಿಗೆ ಮೀನು ಗಾರಿಕೆ ಇಲಾಖೆಯಿಂದ ಸೂಚಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಮಲ್ಪೆವಲಯದಲ್ಲಿ ಸೊತ್ತಿನ ಅಪರಾಧಗಳು ನಡೆಯು ತ್ತಿದ್ದು ಹೆಚ್ಚು ಹಣಕಾಸಿನ ವ್ಯವಹಾರ ನಡೆಯುವಲ್ಲಿ ಸಿಸಿಟಿವಿ ಅಳವಡಿಸುವಿಕೆ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸುವಂತೆ ಮತ್ತು ಹೆಚ್ಚಿನ ಹಣಕಾಸಿನ ವ್ಯವಹಾರವನ್ನು ಬ್ಯಾಂಕ್‌ಗಳ ಮೂಲಕ ನಡೆಸುವಂತೆ ಸೂಚಿಸಲಾಯಿತು.
ನೆರೆ ಮತ್ತು ಇತರೆ ನೈಸರ್ಗಿಕ ವಿಕೋಪದ ಸಮಯದಲ್ಲಿ ಮೀನುಗಾರರು ಮತ್ತು ದೋಣಿಗಳ ಅವಶ್ಯಕತೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಈಗಾಗಲೇ ಎಲ್ಲಾ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಸಕ್ರಿಯವಾಗಿ ಸಹಕಾರ ನೀಡಿದ್ದು ಮುಂದೆಯೂ ಸಂಪೂರ್ಣ ಸಹಕಾರ ನೀಡುವುದಾಗಿ ಮೀನುಗಾರರ ಸಂಘದ ಮುಖಂಡರು ಭರವಸೆ ನೀಡಿದರು.
ಸಭೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ವಿವಿಧ ಮೀನುಗಾರಿಕಾ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕರಾವಳಿ ರಕ್ಷಣಾ ಪಡೆ, ಕರಾವಳಿ ರಕ್ಷಣಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಬೀಚ್‌ಗಳಲ್ಲಿ ಸಿಸಿಟಿವಿ ಅಳವಡಿಕೆ
ಮೀನುಗಾರಿಕೆ ಬಂದರು, ಜಟ್ಟಿಗಳಲ್ಲಿ ಅಳವಡಿಸಿರುವ ಸಿಸಿಟಿವಿ, ಹೈಮಾಸ್ಕ್ ಲೈಟ್ ಮತ್ತು ದಾರಿ ದೀಪದ ರಿಪೇರಿ ಹಾಗೂ ಅಳವಡಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು. ಬೀಚ್ ಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಹೆಚ್ಚಿನ ಸಿಸಿಟಿವಿ ಅಳವಡಿಸುವ ಕುರಿತು ಮಲ್ಪೆ ಬೀಚ್ ಸಮಿತಿ ಜೊತೆ ಪತ್ರ ವ್ಯವಹಾರ ಮಾಡುವ ಬಗ್ಗೆ ಸಭೆಯಲ್ಲಿ ತಿರ್ಮಾನಿ ಸಲಾಯಿತು
ಮೀನುಗಾರಿಕೆ ಸ್ಥಗಿತಗೊಂಡ ಸಮಯದಲ್ಲಿ ಬಂದರಿನ ಹೊರ ಮತ್ತು ಒಳಗೆ ಹೋಗುವ ದ್ವಾರದಲ್ಲಿ ದಿನದ 24 ಗಂಟೆ ಸೆಕ್ಯೂರಿಟ್ ಗಾರ್ಡ್ ಮತ್ತು ಮೀನು ಗಾರಿಕಾ ದೋಣಿ ಹಾಗೂ ಮೀನುಗಾರರ ಚಲನವಲನವನ್ನು ದಾಖಲಿಸಲು ಫಿಶಿಂಗ್ ವಾರ್ಡನ್‌ಗಳನ್ನು ಮೀನುಗಾರಿಕಾ ಇಲಾಖೆಯಿಂ ನೇಮಿಸುವ ಬಗ್ಗೆ ಚರ್ಚಿಸಲಾಯಿತು.







