ದ್ವಿ.ಪಿಯುಸಿ ಮರುಮೌಲ್ಯಮಾಪನ: ಅಭಿಷೇಕಗೆ 18 ಹೆಚ್ಚುವರಿ ಅಂಕ

ಉಡುಪಿ, ಜೂ.4: ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಅಭಿಷೇಕ್ ಎನ್.ಆಚಾರ್ಯ ದ್ವಿತೀಯ ಪಿಯುಸಿ ಮರು ಮೌಲ್ಯಮಾಪನದಲ್ಲಿ ಆಂಗ್ಲ ಭಾಷೆಯಲ್ಲಿ 11 ಹಾಗೂ ಹಿಂದಿ ಭಾಷೆಯಲ್ಲಿ 7 ಹೆಚ್ಚುವರಿ ಅಂಕಗಳನ್ನು ಪಡೆಯುವ ಮೂಲಕ ಒಟ್ಟು 588 ಅಂಕಗಳನ್ನು ಗಳಿಸಿದ್ದು, ರಾಜ್ಯಕ್ಕೆ ಏಳನೇ ರ್ಯಾಂಕ್ ಪಡೆದಿದ್ದಾನೆ ಎಂದು ಕಾಲೇಜಿನ ಪ್ರಾಂಶುಪಾಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





