ಉಡುಪಿ: ಯುವತಿ ನಾಪತ್ತೆ

ಉಡುಪಿ, ಜೂ.4:ಬಟ್ಟೆ ಖರೀದಿಗೆಂದು ತೆರಳಿದ್ದ ಯುವತಿಯೊಬ್ಬರು ಮನೆಗೆ ಮರಳದೇ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಮೂಡನಿಡಂಬೂರು ಗ್ರಾಮದ ಪಂದುಬೆಟ್ಟು ಎಂಬಲ್ಲಿ ಯಾಸೀನ್ ಎಂಬವರ ಹೆಂಡತಿ ಆಫ್ರೀನ್ (24) ಎಂಬವರು ಮೇ 29 ರಂದು ಉಡುಪಿಗೆ ಬಟ್ಟೆ ಖರೀದಿಗೆಂದು ತೆರಳಿದವರು ವಾಪಾಸು ಬಂದಿಲ್ಲ. ಇವರು 142 ಸೆಂಮೀ. ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಕನ್ನಡ, ಉರ್ದು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





