ಕಾರು ಢಿಕ್ಕಿ: ಪಾದಾಚಾರಿ ಮೃತ್ಯು
ಉಡುಪಿ, ಜೂ.4: ಸಂತೆಕಟ್ಟೆ ಬೃಂದಾವನ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೂ.3ರಂದು ಸಂಜೆ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಉಡುಪಿ ಪುತ್ತೂರಿನ ಗೋಪಾಲ ಪೂಜಾರಿ (65) ಎಂದು ಗುರುತಿಸ ಲಾಗಿದೆ. ಪೈಂಟಿಂಗ್ ಕೆಲಸ ಮಾಡುವ ಇವರು ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಮಹೇಂದ್ರ ಕಂಪೆನಿಯ ಹೊಸ ಆಲ್ಟ್ರಾಸ್ ಕಾರು ಢಿಕ್ಕಿ ಹೊಡೆ ಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗೋಪಾಲ ಪೂಜಾರಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





