ಮೀಲಾದುನ್ನೆಬಿ ರಜೆ ರದ್ದುಪಡಿಸದಿರಲು ಮುಸ್ಲಿಂ ಲೀಗ್ ಮನವಿ
ಮಂಗಳೂರು, ಜೂ.4: ಪ್ರವಾದಿ ಮುಹಮ್ಮದ್ (ಸ)ಅವರ ಜನ್ಮ ದಿನಾಚರಣೆಯ ಅಂಗವಾಗಿ ಘೋಷಿಸಲ್ಪಟ್ಟಿರುವ ಮೀಲಾದುನ್ನೆಬಿ ರಜೆಯನ್ನು ರದ್ದುಪಡಿಸದಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸುಲೈಮಾನ್ ಎಸ್. ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಹಬ್ಬಗಳನ್ನು ರದ್ದುಗೊಳಿಸಲು ನೇಮಕಗೊಂಡಿರುವ ಸಮಿತಿಯು ಪ್ರವಾದಿ ಮುಹಮ್ಮದ್ (ಸ)ಅವರ ಜನ್ಮ ದಿನದ ರಜೆಯನ್ನು ರದ್ದುಗೊಳಿಸಲು ಸಲಹೆ ನೀಡಿದೆ. ಆದರೆ ಯಾವ ಕಾರಣಕ್ಕೂ ರಾಜ್ಯ ಸರಕಾರ ಈ ರಜೆಯನ್ನು ರದ್ದುಗೊಳಿಸಬಾರದು ಅಲ್ಲದೆ ಗುಡ್‌ಫ್ರೂಡೆ ಮತ್ತು ಸಮಕಾಲೀನ ವಚನಕಾರರ ಜನ್ಮದಿನಾಚರಣೆಯ ರಜೆಯನ್ನೂ ರದ್ದುಗೊಳಿಸಬಾರದು ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
Next Story





