ಸಮುದ್ರದಿಂದ ಬಾಹ್ಯಾಕಾಶಕ್ಕೆ ಮೊದಲ ಬಾರಿ ರಾಕೆಟ್ ಉಡಾಯಿಸಿದ ಚೀನಾ
ಬೀಜಿಂಗ್, ಜೂ.5: ಚೀನಾ ದೇಶ ಸಮುದ್ರದಲ್ಲಿರುವ ಹಡಗಿನ ಮೂಲಕ ಇದೇ ಮೊದಲ ಬಾರಿ ರಾಕೆಟ್ನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾಯಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚೀನಾ ಈ ಮೂಲಕ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಲಾಂಗ್ ಮಾರ್ಚ್ 11 ರಾಕೆಟನ್ನು ಹಳದಿ ಸಮುದ್ರದಲ್ಲಿ ಅರ್ಧ ಮುಳುಗಿರುವ ಹಡಗಿನಿಂದ ಬಾಹ್ಯಾಕಾಶಕ್ಕೆ ಹಾರಿ ಬಿಡಲಾಗಿದೆ ಮಾಧ್ಯಮಗಳು ವರದಿ ಮಾಡಿವೆ. ಚೀನಾ 125ಗೆ ಸೇರಿದ ಎರಡು ಸಂವಹನ ಉಪಗ್ರಹವನ್ನು ರಾಕೆಟ್ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ. ಬೀಜಿಂಗ್ ಮೂಲದ ಈ ಕಂಪೆನಿ ಜಾಗತಿಕ ದತ್ತಾಂಶ ಜಾಲಗಳ ಸೇವೆಗೆ ನೂರಾರು ಉಪಗ್ರಹಗಳನ್ನು ಉಡಾಯಿಸುವ ಯೋಜನೆ ಹಾಕಿಕೊಂಡಿದೆ.
ಹಡಗಿನಂತಹ ಚಲಿಸುವ ವಸ್ತುವಿನಿಂದ ತ್ವರಿತವಾಗಿ ಹಾರುವಂತಹ ಚಿಕ್ಕ ರಾಕೆಟನ್ನು ನಿರ್ಮಿಸಲಾಗಿದ್ದು, ಈ ರಾಕೆಟ್ ಮೂಲಕ ಸಮುದ್ರದ ಮೇಲ್ಮೈ ಗಾಳಿಯನ್ನು ಅಳತೆ ಮಾಡಿ ಬಿರುಗಾಳಿಯ ಮುನ್ಸೂಚನೆ ನೀಡಬಲ್ಲ ಉಪಗ್ರಹ ಸೇರಿದಂತೆ ಒಟ್ಟು ಏಳು ಉಪಗ್ರಹವನ್ನು ಗಗನಕ್ಕೆ ಹಾರಿಸಲಾಗಿದೆ.
Next Story