ಕಾರ್ಕಳ ತಾಪಂ ಕೆಡಿಪಿ ಸದಸ್ಯರಾಗಿ ಕೆ. ಶ್ರೀಕಾಂತ್ ಪೂಜಾರಿ ನೇಮಕ

ಕಾರ್ಕಳ, ಜೂ.5: ಕಾರ್ಕಳ ತಾಲೂಕು ಪಂಚಾಯತ್‌ನ ತ್ರೈಮಾಸಿಕ ಪರಿಶೀಲನ ಸಮಿತಿ(ಕೆಡಿಪಿ) ನಾಮನಿರ್ದೇಶನ ಸದಸ್ಯರಾಗಿ ಹೆಬ್ರಿ ತಾಲೂಕು ಕುಚ್ಚೂರು ಕಾನ್ಬೆಟ್ಟು ಹಕ್ಲು ಮನೆಯ ಶ್ರೀಕಾಂತ್ ಪೂಜಾರಿ ಅವನ್ನು ಸರಕಾರ ನೇಮಕ ಮಾಡಿದೆ.
ಶ್ರೀಕಾಂತ ಪೂಜಾರಿ ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಸಾಮಾಜಿಕ ಹಾಗೂ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕಾಪು ಯೋಗೀಶ್ ವಿ.ಶೆಟ್ಟಿ ಅವರ ಶಿಫಾರಸ್ಸಿನಂತೆ ಸರಕಾರ ಈ ನೇಮಕ ಮಾಡಿದೆ.
Next Story





