ನೀಟ್ ಫಲಿತಾಂಶ ಪ್ರಕಟ: ಶಾಹೀನ್ ಕಾಲೇಜಿನ ಮುದಸಿರ್ ಅಹ್ಮದ್ ಗೆ ದೇಶಕ್ಕೆ 438 ನೇ ರ‍್ಯಾಂಕ್

ಬೆಂಗಳೂರು, ಜೂ.5: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಬೆಂಗಳೂರಿನ ಶಾಹೀನ್ ಫಾಲ್ಕನ್ ಪಿಯು ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಮುದಸಿರ್ ಅಹ್ಮದ್ ದೇಶಕ್ಕೆ 438 ನೇ ರ‍್ಯಾಂಕ್ ಪಡೆದಿದ್ದಾನೆ.
ಮುದಸಿರ್ ಅಹ್ಮದ್ ಒಟ್ಟು 663 ಅಂಕ (99.96%) ಗಳನ್ನು ಗಳಿಸಿದ್ದಾನೆ. ಈತ ಶೈಖ್ ಮುಸ್ಲಿಯಾರ್ ಹಾಗೂ ಝೀನತುನ್ನೀಸ ದಂಪತಿಯ ಪುತ್ರ.
ನೀಟ್ ಪರೀಕ್ಷೆಗೆ ಒಟ್ಟು 14,10,755 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 7.97 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Next Story





