ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ಎಸೆಸೆಲ್ಸಿಯಲ್ಲಿ ಅಗ್ರ ಅಂಕ ಪಡೆದ 500 ವಿದ್ಯಾರ್ಥಿಗಳು

ಮಂಗಳೂರು, ಜೂ.5: ಸರ್ಕಾರದ ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆ ಆರಂಭಿಸಿದ ಬಾಲಕಿಯರ ಸಬಲೀಕರಣ ಕೌಶಲ್ಯ ತರಬೇತಿ 'ಚೇತನ'ದ 4ನೇ
ಆವೃತ್ತಿಗೆ ಮಂಗಳೂರಿನ ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆ ಕರ್ನಾಟಕದ ಎಲ್ಲೆಡೆ ಇರುವ ಸರ್ಕಾರಿ ಪ್ರೌಢಶಾಲೆಗಳ ಎಸೆಸೆಲ್ಸಿಯಲ್ಲಿ ಅಗ್ರಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ಜಾಗೃತಿ ಮತ್ತು ತಂತ್ರಜ್ಞಾನ ಹಾಗೂ ಉದ್ಯಮಶೀಲತೆಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಪ್ರತಿ ವರ್ಷ ರಾಜ್ಯದಲ್ಲಿ ಎಸೆಸೆಲ್ಸಿಯಲ್ಲಿ ಅಗ್ರ ಅಂಕ ಪಡೆದ 500 ವಿದ್ಯಾರ್ಥಿಗಳನ್ನು ಆರಿಸಿ ಒಂದು ವಾರದ ಅವಧಿಯ ವಸತಿ ಶಿಬಿರವನ್ನು ಇನ್‍ಫೋಸಿಸ್ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗುತ್ತದೆ, ಅವರಿಗೆ ಸಾಫ್ಟ್ ಸ್ಕಿಲ್‍ಗಳು, ತಂತ್ರಜ್ಞಾನ ಸಂಪರ್ಕ ಮತ್ತು ಒಟ್ಟಾರೆ ವ್ಯಕ್ತಿತ್ವ ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಪರಿಣತರು ವಿದ್ಯಾರ್ಥಿನಿಯರಿಗೆ ವೃತ್ತಿ ಜೀವನಕುರಿತ ಸಲಹೆ ಮತ್ತು ತಂತ್ರಜ್ಞಾನಗಳ ಹಲವು ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಸರ್ಕಾರದ ಐಟಿ, ಬಿಟಿ ಮತ್ತು ಎಸ್&ಟಿಇಲಾಖೆ ಆರಂಭಿಸಿದ ಬಾಲಕಿಯರ ಸಬಲೀಕರಣ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿ(ಕೆಐಟಿಎಸ್)ಯು ಸ್ಯಾಮ್‍ಸಂಗ್ ಮತ್ತು ಇನ್‍ಫೋಸಿಸ್ ಸಹಯೋಗದಲ್ಲಿ ಚಾಲನೆ ನೀಡುತ್ತಿದೆ. ಚೇತನಾ ಶಿಬಿರದ ಕುರಿತು ಕರ್ನಾಟಕ ಸರ್ಕಾರದ ಐಟಿ ಬಿಟಿ ಮತ್ತು ಎಸ್&ಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಮಾತನಾಡಿ, 'ಯುವ
ಮನಸ್ಸುಗಳನ್ನು ಉತ್ತಮಪಡಿಸಿ ಮಹಿಳೆಯರನ್ನು ಸಬಲೀಕರಿಸುವ ಕರ್ನಾಟಕ ಸರ್ಕಾರದ ಯೋಜನೆಯ ಭಾಗ ಈ ಉಪಕ್ರಮವಾಗಿದೆ. ಅವರಲ್ಲಿ ವಿಶ್ವಾಸ ಮೂಡಿಸಿ, ಉದ್ಯಮಶೀಲತೆ ಮತ್ತು ನವೀನತೆಗಳಿಗೆ ರಾಜ್ಯದಲ್ಲಿ ಪ್ರೋತ್ಸಾಹ ನೀಡುವ ಚಿಂತನೆ ಇದರಲ್ಲಿದೆ. ವಿದ್ಯಾರ್ಥಿಗಳು ಈ ಶಿಬಿರವನ್ನು ಪೂರ್ಣಗೊಳಿಸಿದ ನಂತರ ಅವರಿಗೆ ಚೇತನಾಸ್ಕಾಲರ್ಸ್ ಎಂದು ಹೆಸರಿಸಲಾಗುತ್ತದೆ' ಎಂದರು.







