ಬಿಜೆಪಿ ಸೇರಿದ ಬಾಂಗ್ಲಾ ನಟಿ: ಪೌರತ್ವದ ಬಗ್ಗೆ ಮೌನ

ಕೊಲ್ಕತ್ತಾ, ಜೂ.6: ಬಾಂಗ್ಲಾದೇಶದ ಚಲನಚಿತ್ರ ನಟಿ ಅಂಜು ಘೋಷ್ ಬುಧವಾರ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಸಮಾರಂಭದಲ್ಲಿ ಅಂಜು ಅವರಿಗೆ ದಿಲೀಪ್ ಬಿಜೆಪಿ ಧ್ವಜವನ್ನು ಹಸ್ತಾಂತರಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಪತ್ರಕರ್ತರು ಅಂಜು ಬಳಿ ಅವರ ಈಗಿನ ಪೌರತ್ವದ ಬಗ್ಗೆ ಪ್ರಶ್ನಿಸಿದಾಗ ಅವರು ಮಾತನಾಡಲು ನಿರಾಕರಿಸಿದ್ದಾರೆ.
ಅಂಜು ಅವರ ಅಭಿನಯದ, 1989ರಲ್ಲಿ ತೆರೆ ಕಂಡ ‘ಬೆಡೆರ್ ಮೇಯೆ ಜೊಸ್ನಾ’ ( ಜೊಸ್ನಾ, ಜಿಪ್ಸಿಯ ಮಗಳು) ಬಾಂಗ್ಲಾದೇಶದ ಇತಿಹಾಸದಲ್ಲಿಯೇ ಗರಿಷ್ಠ ಗಳಿಕೆ ದಾಖಲಿಸಿದ ಚಿಲನಚಿತ್ರವಾಗಿ ಹೊರಹೊಮ್ಮಿತ್ತು.
Next Story