ಮನೆಗೆ ನುಗ್ಗಿ ಕಳವು: 10 ಆರೋಪಿಗಳ ಬಂಧನ

ಬೆಂಗಳೂರು, ಜೂ.7: ಮನೆಗೆ ನುಗ್ಗಿ ಕಳವು ಮಾಡಿದ್ದ ಆರೋಪ ಪ್ರಕರಣ ಸಂಬಂಧ 10 ಮಂದಿ ಆರೋಪಿಗಳನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ನಗರದ ಭಾಸ್ಕರ್(41), ಶಶಿಧರ್(41), ಆನಂದ್(30), ಆರ್‌ಟಿ ನಗರದ ಮದನ್(33), ಪ್ರಕಾಶ್ ನಗರದ ರಂಗನಾಥ್(31), ಸುರೇಶ್(36), ಸಂತೋಷ್(34), ಮಲ್ಲೇಶ್ವರಂ ನಿವಾಸಿ ಕಿರಣ್(25), ಶ್ರೀರಾಂಪುರ ಸುರೇಶ್(30), ರಾಜಾಜಿನಗರದ ರಮೇಶ್(34) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ರಾಜಾಜಿನಗರದ 12ನೆ ಮುಖ್ಯರಸ್ತೆಯ ಗಿರಿಧರ್ ಅವರು ಹೊರಗೆ ಹೋಗಿದ್ದಾಗ ಮನೆಗೆ ನುಗ್ಗಿ ಕಿಟಕಿ, ಬಾಗಿಲುಗಳನ್ನು ಹೊಡೆದು ಹಾನಿಗೊಳಿಸಿ ನಗದು, ಚಿನ್ನಾಭರಣ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರ ಪೊಲೀಸರು ಆರೋಪಿಗಳನ್ನು ಖಚಿತ ಮಾಹಿತಿ ಸಂಗ್ರಹಿಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





