ಐಷಾರಾಮಿ ಕಾರುಗಳ ಸ್ವಚ್ಛತೆಗೆ ಕುಡಿಯುವ ನೀರಿನ ಬಳಕೆ: ಕೊಹ್ಲಿಯ ಚಾಲಕನಿಗೆ ದಂಡ

ಹೊಸದಿಲ್ಲಿ, ಜೂ.7: ವಿಶ್ವ ಕ್ರಿಕೆಟ್‌ನ ಚಿರಪರಿಚಿತ ಮುಖ ವಿರಾಟ್ ಕೊಹ್ಲಿ ಪ್ರಸ್ತುತ ತನ್ನ ಸಹ ಆಟಗಾರರೊಂದಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಪ್ರಶಸ್ತಿ ಗೆದ್ದುಕೊಂಡು ಬರಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ, ಗುರ್ಗಾಂವ್‌ನಲ್ಲಿರುವ ಅವರ ಬಂಗ್ಲೆಯಲ್ಲಿ ಸಿಬ್ಬಂದಿಗಳು ಕುಡಿಯುವ ನೀರಿನಿಂದ ಕೊಹ್ಲಿಯ ಐಷಾರಾಮಿ ಕಾರುಗಳನ್ನು ಸ್ವಚ್ಛಗೊಳಿಸಿ ಗುರುಗಾಂವ್‌ನ ಮಹಾನಗರ ಪಾಲಿಕೆಗೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿರಾಟ್ ಕೊಹ್ಲಿಯವರ ಚಾಲಕ ಹಾಗೂ ಸಿಬ್ಬಂದಿ ಬೆಳಗ್ಗೆ ಕಾರನ್ನು ತೊಳೆಯುತ್ತಿದ್ದರು. ಇದನ್ನು ಗಮನಿಸಿದ ಮಹಾನಗರ ಪಾಲಿಕೆ ಫ್ಲೈಯಿಂಗ್ ಸ್ಕ್ವಾಡ್ ಕುಡಿಯುವ ನೀರನ್ನು ವ್ಯರ್ಥ ಮಾಡಿರುವುದಕ್ಕೆ ಹಾಗೂ ನಿರ್ಲಕ್ಷವಹಿಸಿರುವುದಕ್ಕೆ 500 ರೂ.ದಂಡ ವಿಧಿಸಿದೆ. ಸಿಬ್ಬಂದಿ ದಂಡವನ್ನು ಭರಿಸಿದ್ದಾರೆ.
ಗುರುಗಾಂವ್‌ನಲ್ಲಿರುವ ಕೊಹ್ಲಿಯ ಮನೆಯಲ್ಲಿ ಸುಮಾರು 6ರಿಂದ ಏಳು ಕಾರುಗಳಿವೆ.
Next Story





