ಸಂತ ಅಲೋಶಿಯಸ್ ಕಾಲೇಜ್: ಶಾಲಾ ನಾಯಕ-ಉಪನಾಯಕರ ಚುನಾವಣೆ

ಮಂಗಳೂರು, ಜೂ.8: ಸಂತ ಅಲೋಶಿಯಸ್ ಕಾಲೇಜಿನ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ನಾಯಕ ಹಾಗೂ ಉಪನಾಯಕನ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.
ಅದಕ್ಕೂ ಮೊದಲು ಅಂದರೆ ಜೂ.4ರಿಂದ 6ರವರೆಗೆ ಬಹಿರಂಗ ಪ್ರಚಾರ ನಡೆಯಿತು. ಜೂ.7 ಎಲ್ಲಾ ಸ್ಪರ್ಧಿಗಳು ಶಾಲಾ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಸಿ ಮತಯಾಚಿಸಿದರು.
ಸ್ಪರ್ಧೆಯಲ್ಲಿ 7 ನೇ ತರಗತಿಯ 9 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ 9ರಿಂದ 11ಗಂಟೆಯವರೆಗೆ ಮತದಾನ ನಡೆಯಿತು. ಪೂರ್ವಾಹ್ನ 11:15ಕ್ಕೆ ಮತ ಎಣಿಕೆ ನಡೆದು 12 ಗಂಟೆಗೆ ಫಲಿತಾಂಶ ಪ್ರಕಟಿಸಲಾಯಿತು.
ಶಾಲಾ ನಾಯಕನಾಗಿ ಈಶಾನ್ ಪಿ.ಬಿ., ಉಪನಾಯಕಿಯಾಗಿ ಡಾಲ್ಮೀಯ ಡೆನ್ನಿಸ್ ಕೆ. ಆಯ್ಕೆಗೊಂಡರು. ಶಾಲಾ ಸಂಚಾಲಕ ವಂ.ಫಾ. ಜೆರಾಲ್ಡ್ ಪುರ್ಟಾದೊ ಹಾಗೂ ಮುಖ್ಯ ಶಿಕ್ಷಕಿ ಫಿಲೋಮಿನಾ ಲೂವಿಸ್ ವಿಜೇತರನ್ನು ಅಭಿನಂದಿಸಿದರು.
Next Story





