ಹುಲ್ಲಾಹೂಪ್: ಐದರ ಬಾಲೆಯ ವಿಶ್ವದಾಖಲೆ!

ಮಂಗಳೂರು, ಜೂ.8: ಐದು ವರ್ಷ ಪ್ರಾಯದ ಬಾಲಕಿ ಆದ್ಯಾ ಎ. ಹುಲ್ಲಾಹೂಪ್ ನೃತ್ಯಶೈಲಿಯಲ್ಲಿ ವಿಶ್ವದಾಖಲೆಗೈದಿದ್ದಾರೆ. ಪಾಶ್ಚಾತ್ಯ ಶೈಲಿಯ ಹುಲ್ಲಾಹೂಪನ್ನು ‘ಸ್ಟಾರ್ ಬುಕ್ ಆಫ್ ಇಂಡಿಯಾ’ ಭಾರತಲ್ಲೂ ಆಯೋಜಿಸುತ್ತಿವೆ. ರಿಂಗ್‌ನ್ನು ಸೊಂಟಕ್ಕೆ ಹಾಕಿ ಅದನ್ನು ಸಂಗೀತಕ್ಕೆ ತಕ್ಕಂತೆ ಅಲುಗಾಡಿಸುವುದೇ ಈ ನೃತ್ಯ.
ಮಠದ ಕಣಿಯ ಅಶ್ವಿನ್-ಪ್ರಿಯಾಂಕಾ ದಂಪತಿಯ ಪುತ್ರಿಯಾಗಿರುವ ಆದ್ಯಾ ಹಾಡುಗಾರಿಕೆ, ಸಿನೆಮಾ, ಸ್ಕೇಟಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾಳೆ. ಎರಡೂವರೆ ವರ್ಷ ವಯಸ್ಸಿನಿಂದಲೇ ಈಕೆಯ ಶಾಲೆಯಲ್ಲೇ ನೃತ್ಯಾಭ್ಯಾಸ ಆರಂಭಿಸಿದಳು. ಎ.6ರಂದು ಎಯ್ಯಾಡಿಯ ಪ್ರಿಯದರ್ಶಿನಿ ಮೊಂಟೆಸರಿಯಲ್ಲಿ ಈಕೆಯ ಪ್ರದರ್ಶನ ನಡೆದಿತ್ತು.
Next Story





