ಜಾನುವಾರುಗಳ ಕಳ್ಳತನ, ಅಕ್ರಮ ಸಾಗಾಟ ಧರ್ಮವಿರೋಧಿ: ಉಡುಪಿ ಜಿಲ್ಲಾ ಖಾಝಿ ಬೇಕಲ್ ಉಸ್ತಾದ್

ಉಡುಪಿ, ಜೂ.8: ಇಸ್ಲಾಮ್ ಧರ್ಮದಲ್ಲಿ ಅಕ್ರಮ ಹಾಗೂ ಕಳ್ಳತನಕ್ಕೆ ಅವಕಾಶ ಇಲ್ಲ. ಆದುದರಿಂದ ಯಾವುದೇ ಪ್ರಾಣಿಗಳನ್ನು ಕಳವು ಮಾಡಿ, ಅಕ್ರಮವಾಗಿ ಸಾಗಿಸಿ, ಹತ್ಯೆ ಮಾಡುವುದು ಧರ್ಮ ವಿರೋಧಿಯಾಗಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಲ್‌ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ತಿಳಿಸಿದ್ದಾರೆ.
ಒಂದು ಧರ್ಮದವರು ದನವನ್ನು ಪೂಜನೀಯವಾಗಿ ಕಾಣುತ್ತಿದ್ದರೆ, ಇನ್ನೊಂದು ಧರ್ಮದವರು ಅದನ್ನು ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಧರ್ಮದವರ ಭಾವನೆಗೆ ಧಕ್ಕೆ ಬಾರದಂತೆ ಗೌರವದಿಂದ ನಾವು ನಡೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸಾಗಾಟ ಮಾಡುವಾಗ ಜಾನುವಾರುಗಳಿಗೆ ಚಿತ್ರಹಿಂಸೆ ನೀಡಬಾರದು. ಕಳವುಗೈದ ದನ, ಕರುಗಳನ್ನು ವಧೆ ಮಾಡಬಾರದು. ಅಂತಹ ಜಾನುವಾರುಗಳ ಮಾಂಸವನ್ನು ಬೇರೆಯವರಿಗೆ ತಿನ್ನಿಸಬಾರದು. ಹಲಾಲ್ ರೂಪದಲ್ಲಿರುವ ಮಾಂಸ ಮಾತ್ರ ನಮಗೆ ತಿನ್ನಲು ಇಸ್ಲಾಮ್ ಕಲಿಸಿ ಕೊಟ್ಟಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





