ಸಂತ ಆಂತೋನಿಯ: ಒಂಬತ್ತನೇ ದಿನದ ನವೇನ ಪ್ರಾರ್ಥನೆ

ಮಂಗಳೂರು, ಜೂ.8: ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ನಡೆಯುತ್ತಿರುವ ಒಂಬತ್ತನೇ ದಿನದ ನವೇನ ಪ್ರಾರ್ಥನೆಯು ಶನಿವಾರ ಜರುಗಿತು.
ಪಂಜ ಧರ್ಮ ಕೇಂದ್ರದ ಮಾಜಿ ಧರ್ಮಗುರು ಫಾ. ಅನಿಲ್ ರೊಶನ್ ಲೊಬೊ ಬಲಿಪೂಜೆ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು ನಾವೆಲ್ಲರೂ ಹುಟ್ಟಿನಿಂದಲೆ ಮಿಶಿನರಿಗಳು ಎಂಬುದನ್ನು ಮರೆಯಬಾರದು. ನಾವಿರುವ ಸ್ಥಳದಲ್ಲಿ, ವಾಸಿಸುವ ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ನಡತೆಯ ಮೂಲಕ ಮಿಶಿನರಿಗಳಾಗಿ ಜೀವಿಸಬೆಕು. ಸಂತ ಆಂತೋನಿ ಕೂಡ ಮಿಶಿನರಿಯಾಗಿ ಕೆಲಸ ಮಾಡಲು ಆಶಿಸಿದರು. ಅವರ ಮಾರ್ಗದರ್ಶನದಲ್ಲಿ ಬದುಕೋನ ಎಂದರು.
ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ತ್ರಿಶಾನ್ ಡಿಸೋಜ ಜಪಸರ ಹಾಗೂ ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಆಶ್ರಮದ ಸಹಾಯಕ ನಿರ್ದೇಶಕ ಫಾ. ರೊಶನ್ ಡಿಸೋಜ ಬಲಿಪೂಜೆಯಲ್ಲಿ ಭಾಗವಹಿಸಿದರು.
Next Story





