ಪತ್ನಿ ಹತ್ಯೆ: ಯೋಧನಿಗೆ ಜೀವಾವಧಿ ಶಿಕ್ಷೆ

ರಾಂಚಿ, ಜೂ. 8: ಪತ್ನಿಯನ್ನು ಅಮಾನುಷವಾಗಿ ಹತ್ಯೆಗೈದ ಆರೋಪದಲ್ಲಿ ಯೋಧ ಮಹೇಂದ್ರ ಮಹತೊಗೆ ರಾಂಚಿಯ ಸ್ಥಳೀಯ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪತ್ನಿ ಹತ್ಯೆ ನಡೆಸಿರುವಲ್ಲಿ ಹಾಗೂ ಮೃತದೇಹವನ್ನು ಬಚ್ಚಿಟ್ಟಿರುವಲ್ಲಿ ಮಹತೊ ದೋಷಿ ಎಂದು ಪರಿಗಣಿಸಿರುವ ನ್ಯಾಯಾಧೀಶ ರಾಜೀವ್ ಆನಂದ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಹಾಗೂ 75,000 ರೂ. ದಂಡ ವಿಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ರಾಂಚಿಯ ಸದಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು.
ಹೊಮೆಬಾ ಗ್ರಾಮದ ನಿವಾಸಿ ಮಹತೊ 2015 ಜುಲೈ 3ರಂದು ತನ್ನ ಪತ್ನಿ ಶೀಲಾ ದೇವಿಯನ್ನು ಹತ್ಯೆಗೈದಿದ್ದ ಹಾಗೂ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪೆಟ್ಟಿಗೆಯಲ್ಲಿ ಹಾಕಿ ಬಚ್ಚಿಟ್ಟಿದ್ದ ಎಂದು ಎಫ್‌ಐಆರ್ ಹೇಳಿದೆ.
Next Story





