Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಡ್ಡೂರು: ಜೂ.10ರಂದು ಅಲ್‌ ಬಿರ್ರ್‌...

ಅಡ್ಡೂರು: ಜೂ.10ರಂದು ಅಲ್‌ ಬಿರ್ರ್‌ ಪ್ರೀ ಇಸ್ಲಾಮಿಕ್ ಸ್ಕೂಲ್ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ9 Jun 2019 10:27 PM IST
share
ಅಡ್ಡೂರು: ಜೂ.10ರಂದು ಅಲ್‌ ಬಿರ್ರ್‌ ಪ್ರೀ ಇಸ್ಲಾಮಿಕ್ ಸ್ಕೂಲ್ ಉದ್ಘಾಟನೆ

ಮಂಗಳೂರು, ಜೂ.9: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಅಧೀನದಲ್ಲಿ ಪ್ರಾರಂಭಗೊಂಡಿರುವ ಅಲ್‌ಬಿರ್ರ್‌ ಪ್ರೀ ಇಸ್ಲಾಮಿಕ್ ಸ್ಕೂಲ್‌ನ ಕರ್ನಾಟಕ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭವು ಜೂ.10ರಂದು ಅಡ್ಡೂರು ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಶಿರ್ವಚನಗೈಯಲಿದ್ದು, ಕಲ್ಲಿಕೋಟೆಯ ಖಾಝಿ ಹಾಗೂ ಅಲ್ ಬಿರ್ರ್‌ನ ಚೇರ್‌ಮ್ಯಾನ್ ಸೈಯದ್ ಮುಹಮ್ಮದ್ ಕೋಯ ಜಮಲುಲೈಲಿ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ನ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅಲ್ ಬಿರ್ರ್‌ ಕನ್ವಿನರ್ ಶೈಖುನಾ ಉಮರ್ ಫೈಝಿ ಮುಕ್ಕಂ ಪ್ರಾಸ್ತಾವಿಕ ಭಾಷಣಗೈಯಲಿದ್ದು, ಅಬ್ದುಲ್ ಸಮದ್ ಪೂಕೋಟೂರು ಮುಖ್ಯ ಪ್ರಭಾಷಣಗೈಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ. ಸಮಸ್ತ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಅಬಿದೀನ್ ತಂಙಳ್, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಅಲ್ ಬಿರ್ರ್‌ ನಿರ್ದೇಶಕ ಡಾ.ಎನ್.ಎ.ಎಂ ಅಬ್ದುಲ್ ಖಾದಿರಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮೌಲಾನಾ ಅನೀಸ್ ಕೌಸರಿ, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮ್ಯಾನೇಜರ್ ಮೋಹಿನ್ ಕುಟ್ಟಿ ಮಾಸ್ಟರ್, ಅಡ್ಡೂರು ಜುಮಾ ಮಸ್ಜಿದ್ ಅಧ್ಯಕ್ಷ ಟಿ. ಸೈಯದ್, ಅಲ್ ಬಿರ್ರ್‌ ಕೇರಳ ಕೋ-ಆರ್ಡಿನೇಟರ್ ಇಸ್ಮಾಯೀಲ್ ಮುಜದ್ದಿದ್, ಎ.ಡಿ. ಇನ್‌ಚಾರ್ಜ್ ಫೈಝಲ್ ಹುದವಿ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವಾ, ಆರ್‌ಜೆಎಚ್‌ಎಚ್‌ಎಸ್ ಸಿಂಡಿಕೇಟ್ ಸದಸ್ಯ ಪ್ರೊ.ಯು.ಟಿ. ಇಫ್ತಿಕಾರ್ ಅಲಿ, ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯಾ, ಜಿಪಂ ಸದಸ್ಯ ಯು.ಪಿ.ಇಬ್ರಾಹೀಂ, ಅಡ್ಡೂರು ಅಲ್ ಬಿರ್ರ್‌ ಸಂಸ್ಥೆಯ ಪ್ರಾಂಶುಪಾಲ ಸಿದ್ದೀಕ್ ಫೈಝಿ, ಜಿಲ್ಲಾ ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಡಿ.ಎಸ್.ರಫೀಕ್, ಅಡ್ಡೂರು ಬದ್ರಿಯ ಜುಮಾ ಮಸೀದಿಯ ಉಪಾಧ್ಯಕ್ಷ ಎಂ.ಎಸ್.ಶೇಖಬ್ಬ, ಖತೀಬ್ ಶರೀಫ್ ದಾರಿಮಿ, ಅಡ್ಡೂರು ಅಲ್ ಬಿರ್ರ್‌ ಕೋಆರ್ಡಿನೇಟರ್ ಕೆ. ಉಮರ್ ಫಾರೂಕ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಅಲ್‌ಬಿರ್ರ್‌ ಕೋಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಏನಿದು ಅಲ್ ಬಿರ್ರ್‌:

2016ರಲ್ಲಿ ಆಲಪುಝದಲ್ಲಿ ನಡೆದ ಸಮಸ್ತದ 90ನೇ ವಾರ್ಷಿಕ ಸಮ್ಮೇಳನದಲ್ಲಿ ಘೋಷಿಸಲ್ಪಟ್ಟ ‘ಅಲ್ ಬಿರ್ರ್‌ ಇಸ್ಲಾಮಿಕ್ ಪ್ರೀ ಸ್ಕೂಲ್’ ಕೇವಲ 3 ವರ್ಷಗಳ ಅವಧಿಯೊಳಗೆ ಭಾರೀ ಜನಮನ್ನಣೆಯನ್ನು ಪಡೆದುಕೊಂಡಿದೆ. ಈ ವರ್ಷದೊಂದಿಗೆ ಅಲ್ ಬಿರ್ರ್‌ 255 ಬ್ಯಾಚುಗಳಲ್ಲಾಗಿ ಕಾರ್ಯನಿರ್ವಹಿಸಲಾರಂಭಿಸಿದೆ. ವಿನೂತನ ಹಾಗೂ ಪ್ರಾಯೋಗಿಕವಾದ ಬೋಧನಾ ಶೈಲಿಗಳಿಗೆ ಹೆಚ್ಚಿನ ಒತ್ತು ನೀಡುವ ಪಠ್ಯಕ್ರಮ ಮತ್ತು ಮೂಲಭೂತ ಸೌಕರ್ಯಗಳನ್ನು ಅಲ್ ಬಿರ್ರ್‌ ಸಜ್ಜುಗೊಳಿಸಿದೆ. ಶಿಶುಗಳ ಬಹುಮುಖ ಬುದ್ಧಿ ವಿಕಾಸಗಳನ್ನು ಪೂರ್ಣವಾಗಿ ಒಳಗೊಳ್ಳುವ ರೀತಿಯ ಪ್ಲೇವೇ ಮಾದರಿಯಲ್ಲಾಗಿ ಈ ಪಠ್ಯ ಪದ್ಧತಿಯನ್ನು ಸಿದ್ಧಪಡಿಸಲಾಗಿದೆ.

ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಬೆಳೆಯುವ ಮಗುವನ್ನು ಪರಿಪಾಲನೆ ಮಾಡುವುದರ ಜೊತೆಗೆ ಜಾತ್ಯಾತೀತ ಸಮಾಜದಲ್ಲಿ ಬದುಕಲು ಆವಶ್ಯವಾದ ನೈಪುಣ್ಯತೆ, ದೇಶಪ್ರೇಮ, ಸಹಿಷ್ಣುತಾ ಮನೋಭಾವವನ್ನು ರೂಪಿಕರಿಸುವ ಅಲ್ ಬಿರ್ರ್‌ ಪಠ್ಯ ಪದ್ಧತಿಯನ್ನು ವಿಶೇಷ ತರಬೇತಿ ಪಡೆದುಕೊಂಡ ಅಧ್ಯಾಪಕರ ಮೂಲಕ ಜಾರಿಗೊಳಿಸಲಾಗುತ್ತದೆ. ಧಾರ್ಮಿಕ ಶಿಕ್ಷಣದ ಜೊತೆಗೆ ಇಂಗ್ಲಿಷ್, ಅರಬಿಕ್, ಗಣಿತ, ಸಮಾಜ ವಿಜ್ಞಾನ, ಕನ್ನಡ ಮುಂತಾದ ವಿಷಯಗಳನ್ನು ಶಿಶುಸ್ನೇಹಿ ವಾತಾವರಣದ ಮೂಲಕ ಕಲಿಸಿಕೊಡಲಾಗುತ್ತದೆ.

ಪುಟಾಣಿ ಮಾಸಿಕ, ಸ್ಫೋಟ್ಸ್ ಮೀಟ್, ಕಿಡ್ಸ್ ಫೆಸ್ಟ್ ಮುಂತಾದವುಗಳು ಅಲ್ ಬಿರ್ರ್‌ ವಿದ್ಯಾ ಸಂಸ್ಥೆಗಳ ವಿಶೇಷತೆಗಳಾಗಿವೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕದಲ್ಲಿ ಹಾಗೂ ಗಲ್ಫ್ ರಾಷ್ಟ್ರಗಳಿಗೂ ಅಲ್ ಬಿರ್ರ್‌ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಕೇರಳದಲ್ಲಿ 255 ಬ್ಯಾಚ್‌ಗಳು, ಕರ್ನಾಟಕದಲ್ಲಿ 4 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ತರಬೇತಿ ಲಭಿಸಿದ 1,500 ಅಧ್ಯಾಪಕರು, 12,000ದಷ್ಟು ವಿದ್ಯಾರ್ಥಿಗಳು ಅಲ್ ಬಿರ್ರ್‌ ವಿದ್ಯಾಲಯದಲ್ಲಿದ್ದಾರೆ.

ಕರ್ನಾಟಕದಲ್ಲಿ ಅಲ್ ಬಿರ್ರ್‌ 

ಕೇರಳದಲ್ಲಿ ಭಾರೀ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿರುವ ಅಲ್ ಬಿರ್ರ್‌ ಪ್ರೀ ಇಸ್ಲಾಮಿಕ್ ಸ್ಕೂಲ್‌ಅನ್ನು ಕರ್ನಾಟಕಕ್ಕೂ ವಿಸ್ತರಿಸುವ ನಿಟ್ಟಿನಲ್ಲಿ ಪಸ್ತುತ ವರ್ಷ ದಕ್ಷಿಣ ಜಿಲ್ಲೆಯ ಅಡ್ಡೂರು, ವಿಟ್ಲ, ಕೈಕಂಬ, ಮೂಡುಬಿದಿರೆ ಮುಂತಾದೆಡೆ ನಾಲ್ಕು ಸ್ಕೂಲ್‌ಗಳು ಪ್ರಾರಂಭಿಸಲಾಗಿದೆ. ಮುಂದಿನ ವರ್ಷದಲ್ಲಿ ಇದನ್ನು 25 ಸ್ಥಳಗಳಿಗೆ ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X