ಶೌಚಾಲಯವೆಂದು ಭಾವಿಸಿ ವಿಮಾನದ ತುರ್ತುನಿರ್ಗಮನ ದ್ವಾರ ತೆರೆದ ಪ್ರಯಾಣಿಕೆ !

ಇಸ್ಲಾಮಾಬಾದ್,ಜೂ.9: ಪ್ರಯಾಣಿಕೆಯೊಬ್ಬರು ಪ್ರಮಾದವಶಾತ್ ಶೌಚಾಲಯದ ಬಾಗಿಲೆಂದು ತಪ್ಪಾಗಿ ಗ್ರಹಿಸಿ ತುರ್ತು ನಿರ್ಗಮನ ದ್ವಾರವನ್ನು ತೆರೆದಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ವಿಮಾನದಲ್ಲಿದ್ದ 36ಕ್ಕೂ ಅಧಿಕ ಪ್ರಯಾಣಿಕರನ್ನು ಕೆಳಗಿಳಿಸಲಾಯಿತೆಂದು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ತಿಳಿಸಿದೆ.
ಬ್ರಿಟನ್‌ನ ಮ್ಯಾಂಚೆಸ್ಟರ್ ವಿಮಾನನಿಲ್ದಾಣದಿಂದ ರನ್‌ವೇಯಲ್ಲಿ ವಿಮಾನ ಸಾಗುತ್ತಿದ್ದಾಗ ಪ್ರಯಾಣಿಕೆಯೊಬ್ಬರು ಪ್ರಮಾದವಶಾತ್‌ತುರ್ತುನಿರ್ಗಮನ ದ್ವಾರವನ್ನು ತೆರೆದಿದ್ದನೆನ್ನಲಾಗಿದೆ.
ಆದರೆ ವಿಮಾನ ಸುರಕ್ಷತಾ ನಿಯಾಮವಳಿಗಳ ಪ್ರಕಾರ ತಕ್ಷಣವೇ ವಿಮಾನವು ತನ್ನ ಪ್ರಯಾಣವನ್ನು ಸ್ಥಗಿತಗೊಳಿಸಿತು ಹಾಗೂ ವಿಮಾನದಲ್ಲಿದ್ದ ಸುಮಾರು 40 ಪ್ರಯಾಣಿಕರು ಹಾಗೂ ಅವರ ಸರಂಜಾಮುಗಳನ್ನು ಕೆಳಗಿಳಿಸಲಾಯಿತು ಎಂದು ಪಿಎಐ ವಕ್ತಾರರು ತಿಳಿಸಿದ್ದಾರೆ.
ಕೆಳಗಿಳಿಸಲ್ಪಟ್ಟ ಪ್ರಯಾಣಿಕರಿಗೆ ಬದಲಿ ಪ್ರಯಾಣದ ವ್ಯವಸ್ತೆ ಮಾಡಲಾಗಿದೆ ಹಾಗೂ ಅಲ್ಲಿಯವರೆಗೆ ತಂಗಲು ಅವರಿಗೆ ವಾಸ್ತವ್ಯದ ವ್ಯವಸ್ಥೆಯನ್ನು ಕೂಡಾ ಏರ್ಪಡಿಸಲಾಗಿದೆಯೆಂದು ಅವರು ಹೇಳಿದ್ದಾರೆ.





