ಜೂ.15: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯಿಂದ ಪ್ರಾಯೋಗಿಕ ಹಜ್ಜ್ ತರಗತಿ

ಮಂಗಳೂರು, ಜೂ.10: ಈ ವರ್ಷ ಹಜ್ಜ್ ಗೆ ತೆರಲುವವರಿಗಾಗಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ದಿನಾಂಕ ಜೂನ್ 15ರಂದು ಬೆಳಗ್ಗೆ 9 ಗಂಟೆಗೆ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ಪ್ರಾಯೋಗಿಕ ಹಜ್ಜ್ ತರಗತಿ ನಡೆಯಲಿದೆ.
ಶೈಖುನಾ ಬೇಕಲ್ ಉಸ್ತಾದ್ ಮತ್ತು ಜಿ.ಎಂ ಕಾಮಿಲ್ ಸಖಾಫಿ ತರಗತಿ ನೀಡಲಿದ್ದಾರೆ ಎಂದು ಪ್ರೋಗ್ರಾಂ ಸಮಿತಿ ಚೇರ್ ಮ್ಯಾನ್ ಇಬ್ರಾಹಿಂ ಅಹ್ಸನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





