ಹಿಂಸೆಯನ್ನು ಯಾವುದೇ ಧರ್ಮ ಬೆಂಬಲಿಸಲ್ಲ: ಇದ್ರೀಸ್ ಹೂಡೆ
ಉಡುಪಿಯಲ್ಲಿ ಸರ್ವಧರ್ಮ ಈದ್ ಆಚರಣೆ

ಉಡುಪಿ, ಜೂ.10: ಎಲ್ಲ ಧರ್ಮಗಳು ಹಿಂಸೆ, ಧ್ವೇಷ, ನರಸಂಹಾರ, ಭಯೋತ್ಪಾದನೆಯನ್ನು ನಿರಾಕರಿಸುತ್ತವೆ. ಇದನ್ನು ಪ್ರೋತ್ಸಾಹಿಸುವುದಾದರೆ ಅದು ಧರ್ಮವೇ ಆಗಿರಲು ಸಾಧ್ಯವಿಲ್ಲ ಎಂದು ಹೂಡೆ ಮಹಮ್ಮದೀಯ ಎಜು ಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಮಹಮ್ಮದ್ ಇದ್ರಿಸ್ ಹೂಡೆ ಹೇಳಿದ್ದಾರೆ.
ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸರ್ವಧರ್ಮ ಈದ್ ಆಚರಣೆ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಉಪವಾಸ ತಿಂಗಳಾದ ರಂಝಾನ್ ಬಳಿಕ ಆಚರಿಸುವ ಈದ್ ಅವ ಲೋಕನ ಹಾಗೂ ದೇವರಿಗೆ ಹತ್ತಿರವಾಗುವ ಸಮಯ ಆಗಿದೆ. ಲೋಕದ ಕಣ್ಣಿಗೆ ಕಾಣದ ಉಪವಾಸವು ಮನುಷ್ಯ ಮತ್ತು ದೇವರ ಸಂಬಂಧವನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಧರ್ಮಪ್ರಾಂತದ ಸಂಪರ್ಕ ಸಾಧನ ಕೇಂದ್ರದ ನಿರ್ದೇಶಕ ಚೇತನ್ ಲೋಬೊ ಮಾತನಾಡಿ, ಧರ್ಮವನ್ನು ತಿಳಿಯದವನಿಗೆ ಆ ಧರ್ಮವನ್ನು ಟೀಕಿ ಸುವ ಅಧಿಕಾರ, ಅರ್ಹತೆ ಇರುವುದಿಲ್ಲ. ಬೇರೆ ಧರ್ಮವನ್ನು ಟೀಕಿಸುವುದು ಸರಿಯಲ್ಲ. ಎಲ್ಲ ಧರ್ಮವನ್ನು ಗೌರವಿಸು ಪರಿಪಾಠ ಬೆಳೆಸಬೇಕು ಎಂದರು.
ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಫಾ.ವಲೇರಿ ಯನ್ ಮೆಂಡೊನ್ಸಾ ಅಧ್ಯಕ್ಷತೆ ವಹಿಸಿದ್ದರು. ಇಂದ್ರಾಳಿ ಪಂಚದುರ್ಗಾಪರ ಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಯಾಗಿದ್ದರು.
ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿಸೋಜ ಸ್ವಾಗತಿಸಿದರು. ಸದಸ್ಯ ಮಹಮ್ಮದ್ ಮೌಲಾ ವಂದಿಸಿದರು. ಆಯೋಗಗಳ ಸಂಯೋಜಕ ಅಲ್ಫೊನ್ಸ್ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು.







