ಹಲ್ಲೆ ಪ್ರಕರಣ: ನಾಲ್ವರು ಆರೋಪಿಗಳು ಸೆರೆ
ಪುತ್ತೂರು: ಕಳೆದ 20 ದಿನಗಳ ಹಿಂದೆ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆ ಪೊಲೀಸರು ಸೋಮವಾರ ನಾಲ್ವರ ಆರೋಪಿಗಳನ್ನು ಬಂಧಿಸಿದ್ದಾರೆ.
ಪುತ್ತೂರು ನಗರದ ಹೊರವಲಯದ ಸಾಲ್ಮರ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಮೇ 22ರಂದು ರಾತ್ರಿ ಮಸೀದಿಗೆ ಹೋಗಿ ಹಿಂದಿರುತ್ತಿದ್ದ ಚಿಕ್ಕಮುಡ್ನೂರು ಗ್ರಾಮದ ಗುಂಪಕಲ್ಲು ನಿವಾಸಿ ಅಬ್ದುಲ್ ಸತ್ತಾರ್ ಎಂಬವರ ಪುತ್ರ ಮಹಮ್ಮದ್ ಸಾದಿಕ್ (21) ಎಂಬವರಿಗೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಹಲ್ಲೆ ಆರೋಪಿಗಳಾದ ನಗರದ ಬಪ್ಪಳಿಗೆ ನಿವಾಸಿ ಅದ್ದು ಪಡೀಲ್(44) ಕಬಕ ಸಮೀಪದ ಪೋಳ್ಯ ನಿವಾಸಿಗಳಾದ ಇಕ್ಬಾಲ್(22) ಮತ್ತು ಸಂಶುದ್ದೀನ್(24) ಹಾಗೂ ಸಾಮೆತ್ತಡ್ಕ ನಿವಾಸಿ ರಫೀಕ್(23) ಬಂಧಿತರು.
ಸೋಮವಾರ ವಿಟ್ಲದಿಂದ ಪುತ್ತೂರು ಕಡೆಗೆ ಆರೋಪಿಗಳು ಮಾರುತಿ ಓಮ್ನಿ ಕಾರಿನಲ್ಲಿ ಆಗಮಿಸುತ್ತಿರುವ ಮಾಹಿತಿ ಅರಿತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





