ಸಂಧಾನ ಸೂತ್ರ ಸಿದ್ಧ: ಪೇಜಾವರಶ್ರೀ
ಉಡುಪಿ, ಜೂ.10:ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದ ಶಾಂತಿ ಸಂಧಾನ ಪ್ರಯತ್ನ ಪ್ರಗತಿಯಲ್ಲಿದ್ದು, ಎರಡೂ ಕಡೆಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಇಬ್ಬರಿಗೂ ಸಮ್ಮತವಾಗಬಹುದಾದ ಸಂಧಾನ ಸೂತ್ರವನ್ನು ಸಿದ್ಧ ಪಡಿಸಲಾಗಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಇನ್ನೊಂದು ಸುತ್ತಿನ ಮಾತುಕತೆಯಲ್ಲಿ ಈ ಸಂಧಾನ ಕಾರ್ಯವು ಪೂರ್ಣಗೊಳ್ಳಲಿದೆ. ಆದರೆ ದೇವಸ್ಥಾನ ಸಮಿತಿಯ ಅಧ್ಯಕ್ಷರ ವೈಯಕ್ತಿಕ ಅನಾನುಕೂಲತೆಯಿಂದಾಗಿ ಜೂ.10ರಂದು ನಡೆಯಬೇಕಾದ ಮಾತುಕತೆಯನ್ನು ಮುಂದೂಡಲಾಗಿದೆ. ನನ್ನ ಪೂರ್ವನಿಯೋಜಿತ ಕಾರ್ಯಕ್ರಮಗಳಿಂದಾಗಿ ಜೂ.23ರ ನಂತರ ಮಾತುಕತೆ ನಡೆಯುತ್ತದೆ ಎಂದು ಪೇಜಾವರಶ್ರೀಗಳು ಇಂದು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





