Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನಾಡು ಕೈ ಹಿಡಿದು ಮುನ್ನಡೆಸುವ...

ನಾಡು ಕೈ ಹಿಡಿದು ಮುನ್ನಡೆಸುವ ಮಾರ್ಗದರ್ಶಕನನ್ನು ಕಳೆದುಕೊಂಡಿದೆ: ಮುನೀರ್ ಕಾಟಿಪಳ್ಳ

ಗಿರೀಶ್ ಕಾರ್ನಾಡ್ ನಿಧನಕ್ಕೆ ಡಿವೈಎಫ್ಐ ಸಂತಾಪ

ವಾರ್ತಾಭಾರತಿವಾರ್ತಾಭಾರತಿ10 Jun 2019 10:57 PM IST
share
ನಾಡು ಕೈ ಹಿಡಿದು ಮುನ್ನಡೆಸುವ ಮಾರ್ಗದರ್ಶಕನನ್ನು ಕಳೆದುಕೊಂಡಿದೆ: ಮುನೀರ್ ಕಾಟಿಪಳ್ಳ

ಮಂಗಳೂರು: ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನದಿಂದ ನಾಡು ಕೈ ಹಿಡಿದು ಮುನ್ನಡೆಸುವ ಮಾರ್ಗದರ್ಶಕನನ್ನು ಕಳೆದುಕೊಂಡಿದೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಂತಾಪ ವ್ಯಕ್ತಪಡಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅಗಲಿಕೆಯಿಂದ ನಾಡು ಓರ್ವ ಪ್ರಬುದ್ದ ಮಾರ್ಗದರ್ಶಕನನ್ನು ಕಳೆದು ಕೊಂಡಂತಾಗಿದೆ. ತುಘಲಕ್ ಮುಂತಾದ ತನ್ನ ಪ್ರಖ್ಯಾತ ನಾಟಕಗಳ ಮೂಲಕ ಇತಿಹಾಸವನ್ನು ಭಿನ್ನ ದೃಷ್ಟಿಯಲ್ಲಿ ನೋಡಿದ, ವರ್ತಮಾನದ ತಲ್ಲಣಗಳಿಗೆ ಮುಖಾಮುಖಿಯಾಗಿಸಿದ ಅವರ ಅಗಾಧ ಪ್ರತಿಭೆಗೆ ಜ್ಞಾನಪೀಠ ದೊರಕಿದ್ದು ಸಹಜವೇ ಆಗಿತ್ತು ಎಂದು ಅವರು ತಿಳಿಸಿದ್ದಾರೆ.

ನಾಟಕ, ಬರಹ, ನಟನೆ, ನಿರ್ದೇಶನಗಳನ್ನು ಕೇವಲ ವೃತ್ತಿ, ಹವ್ಯಾಸವನ್ನಾಗಿಯಷ್ಟೇ ನೋಡದೆ ಅವುಗಳನ್ನು ಸಮಾಜವನ್ನು ತಿದ್ದಲು, ಕಲಿಯಲು ಪೂರಕವಾಗುವಂತೆ ಬಳಸಿಕೊಂಡದ್ದು ಕಾರ್ನಾಡರ ಕಳಕಳಿಯನ್ನು ಎತ್ತಿತೋರಿಸುತ್ತದೆ. ತನ್ನ ವಿದ್ಯೆ, ಪ್ರತಿಭೆ, ಸಾಧನೆಗಳಿಂದಾಗಿ ಅಂತರ್ ರಾಷ್ಟ್ರೀಯ ಖ್ಯಾತಗಳಿಸಿ ಸಮಾಜದ ಅತ್ಯಂತ ಮೇಲ್ಸತರಕ್ಕೆ ಏರಿದ್ದರೂ ಬಡವರ, ಇಲ್ಲದವರ ಪರ ಮಿಡಿಯುತ್ತಿದ್ದದ್ದು ಅಂತವರ ಪರವಾಗಿ ಬೀದಿಗಿಳಿಯುತ್ತಿದ್ದದ್ದು ಕಾರ್ನಾಡರ ಉನ್ನತ ವ್ಯಕ್ತಿತ್ವಕ್ಕೆ ನಿದರ್ಶನ ಎಂದರು.

ಡಿವೈಎಫ್ಐ ಸಂಘಟನೆಯ ಹಿತೈಷಿಯಾಗಿದ್ದ ಗಿರೀಶ್ ಕಾರ್ನಾಡರು ಸಂಘಟನೆ ಹಮ್ಮಿಕೊಂಡಿದ್ದ ಹಲವು ಸೌಹಾರ್ದಪರ ಕಾರ್ಯಕ್ರಮಗಳಲ್ಲಿ  ಭಾಗಿಯಾಗಿದ್ದರು.  ವರ್ಷಗಳ ಹಿಂದೆ ಬಲಪಂಥೀಯ ಶಕ್ತಿಗಳು "ಗೋ ಹತ್ಯೆ" ವಿಚಾರವನ್ನು ಮುಂದಿಟ್ಟು ಜನರ ಆಹಾರದ ಹಕ್ಕಿನ ಮೇಲೆ ದಾಳಿಯನ್ನು ತೀವ್ರಗೊಳಿಸಿದಾಗ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಡಿವೈಎಫ್ಐ ಹಮ್ಮಿಕೊಂಡಿದ್ದ "ಆಹಾರದ ಹಕ್ಕಿಗಾಗಿನ ಸಮಾವೇಶ" ದಲ್ಲಿ ಭಾಗವಹಿಸಿ ಫ್ಯಾಸಿಸ್ಟ್ ಅಪಾಯ ಬಲಗೊಳ್ಳುತ್ತಿರುವುದರ ಕುರಿತು ನಮ್ಮೆಲ್ಲರನ್ನು ಎಚ್ಚರಿಸಿದ್ದರು‌. ಮೋದಿ ಸರಕಾರ ಬಡವರ, ಕಾರ್ಮಿಕರ, ಆದಿವಾಸಿಗಳ, ದಲಿತರ ಪರ ಧ್ವನಿ ಎತ್ತಿದವರನ್ನು "ನಗರ ನಕ್ಸಲ್" ಎಂದು ಪಟ್ಟಿಕಟ್ಟಿ ಜೈಲಿಗೆ ತಳ್ಳಿದಾಗ ತನ್ನ ಅನಾರೋಗ್ಯದ ನಡುವೆಯೂ "ನಾನೂ ನಗರ ನಕ್ಸಲ್" ಎಂದು ಬಿತ್ತಿಪತ್ರ ಹಿಡಿದು ಪ್ರಭುತ್ವದ ಕ್ರೌರ್ಯವನ್ನು ಪ್ರತಿಭಟಿಸಿದ್ದು ಕಾರ್ನಾಡರ ಬದ್ದತೆಗೆ ಒಂದು ಉದಾಹರಣೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಅವರ ಯಾವ ಕೃತಿಗಳನ್ನೂ ಓದಿರದ, ಭಾಷಣಗಳನ್ನು ಕೇಳಿರದ ಬಹುದೊಡ್ಡ ಗುಂಪೊಂದು, ಬಲಪಂಥೀಯ ಶಕ್ತಿಗಳು ಹರಿಯ ಬಿಟ್ಟ ಸುಳ್ಳುಗಳನ್ನೇ ನಂಬಿ ಕಾರ್ನಾಡರ ಸಾವನ್ನು ಬಹಿರಂಗವಾಗಿ ಸಂಭ್ರಮಿಸುತ್ತಿರುವುದು, ಅಸಭ್ಯವಾಗಿ ನಿಂದಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಕಾರ್ನಾಡರ ಘನತೆಗೇನು ಕುಂದು ಬರುವುದಿಲ್ಲ. ಆದರೆ ಮಹಾನ್ ವ್ಯಕ್ತಿತ್ವವೊಂದನ್ನು ಈ ರೀತಿ ಅವಮಾನಿಸುವುದು ಖೇದಕರ. ಇಂತಹ ಮನಸ್ಥಿತಿಯನ್ನು ದೇಶದಲ್ಲಿ ಹುಟ್ಟುಹಾಕಿರುವ ರಾಜಕೀಯ ಶಕ್ತಿಗಳು ಈಗಲಾದರೂ ಆತ್ಮಾವಲೋಕನ‌ ಮಾಡಿಕೊಳ್ಳಬೇಕಿದೆ ಎಂದರು.

ದೇಶ ಇಂದು ಎದುರಿಸುತ್ತಿರುವ ನೈತಿಕ, ಸಾಂಸ್ಕೃತಿಕ ಬಿಕ್ಕಟ್ಟಿನ ಸಂದರ್ಭ ಗಿರೀಶ್ ಕಾರ್ನಾಡ್ ರ ನಿಧನ ನಿಜಕ್ಕೂ ದೊಡ್ಡ ನಷ್ಟ. ಅವರ ಅಗಲಿಕೆ ಕೈ ಹಿಡಿದು ಮುನ್ನಡೆಸುವ ಮಾರ್ಗದರ್ಶಕನೊಬ್ಬನನ್ನು ಕಳೆದು ಕೊಂಡಂತಹ ನಿರ್ವಾತವನ್ನು ನಾಡಿನಲ್ಲಿ ನಿರ್ಮಿಸಿದೆ. ಅವರ ನಿರ್ಗಮನ‌ ಪ್ರಗತಿಶೀಲ ಚಳವಳಿಯನ್ನು  ಬಹುಕಾಲ ಕಾಡಲಿದೆ. ಗಿರೀಶ್ ಕಾರ್ನಾಡ್ ನಿಧನಕ್ಕೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಅಪಾರ ಶೋಕವನ್ನು ವ್ಯಕ್ತಪಡಿಸುತ್ತದೆ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X