Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಗೊತ್ತಿರಲಿ… ಈ ಉದ್ಯೋಗಗಳು ನಿಮ್ಮ...

ನಿಮಗೆ ಗೊತ್ತಿರಲಿ… ಈ ಉದ್ಯೋಗಗಳು ನಿಮ್ಮ ಶ್ವಾಸಕೋಶಗಳಿಗೆ ಅಪಾಯಕಾರಿ

ವಾರ್ತಾಭಾರತಿವಾರ್ತಾಭಾರತಿ11 Jun 2019 6:38 PM IST
share
ನಿಮಗೆ ಗೊತ್ತಿರಲಿ… ಈ ಉದ್ಯೋಗಗಳು ನಿಮ್ಮ ಶ್ವಾಸಕೋಶಗಳಿಗೆ ಅಪಾಯಕಾರಿ

 ಉದ್ಯೋಗ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ ಎನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ. ನೀವು ಕೆಲಸ ಮಾಡುವ ಪರಿಸರ ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರ ಶುದ್ಧವಾಗಿದ್ದರೆ ಸರಿ, ಇಲ್ಲದಿದ್ದರೆ ನಿಮ್ಮ ಹೃದಯ,ಶ್ವಾಸಕೋಶ...ಅಷ್ಟೇ ಏಕೆ,ಶರೀರದ ಪ್ರತಿಯೊಂದು ಅಂಗವೂ ಅನಾರೋಗ್ಯಕ್ಕೆ ತುತ್ತಾಗುತ್ತದೆ.

ಶೇ.17ರಷ್ಟು ಶ್ವಾಸಕೋಶ ಕಾಯಿಲೆಗಳಿಗೆ ಕೆಲಸದ ವಾತಾವರಣ ಕಾರಣವಾಗುತ್ತದೆ ಮತ್ತು ಈಗಾಗಲೇ ಅಸ್ತಮಾದಂತಹ ಉಸಿರಾಟ ಸಂಬಂಧಿತ ಕಾಯಿಲೆಗಳಿಂದ ನರಳುತ್ತಿರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.

ರಾಸಾಯನಿಕಗಳು, ಕೀಟಾಣುಗಳು, ತಂಬಾಕಿನ ಹೊಗೆ, ಕೊಳೆ ,ನಾರು, ಧೂಳು ಇತ್ಯಾದಿ ಮಾಲಿನ್ಯಗಳು ನಿಮ್ಮ ಶ್ವಾಸಕೋಶಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಆರೋಗ್ಯಕ್ಕೆ ಹಾನಿಕರವಲ್ಲ ಎಂದು ನೀವು ಭಾವಿಸುವ ಕೆಲವು ಅಂಶಗಳು ಅಪಾಯಕಾರಿಯಾಗಬಹುದು ಹಾಗೂ ಶ್ವಾಸನಾಳದಲ್ಲಿ ತಡೆಯನ್ನೊಡ್ಡಿ ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡಬಹುದು. ಹೆಚ್ಚಿನ ಜನರಿಗೆ ತಾವು ಕೆಲಸ ಮಾಡುತ್ತಿರುವ ಸ್ಥಳ ತಮ್ಮ ಆರೋಗ್ಯಕ್ಕೆ ಸುರಕ್ಷಿತವೇ ಎನ್ನುವುದೂ ಗೊತ್ತಿರುವುದಿಲ್ಲ ಎಂದು ಅಧ್ಯಯನಗಳು ಬಹಿರಂಗಗೊಳಿಸಿವೆ. ನಿಮ್ಮ ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುವ ವಿವಿಧ ಉದ್ಯೋಗಗಳ ಕುರಿತು ಮಾಹಿತಿಯಿಲ್ಲಿದೆ.

* ಹೌಸ್‌ಕೀಪಿಂಗ್ ಮತ್ತು ಕ್ಲೀನಿಂಗ್

ಇಂದು ದೊಡ್ಡ ಆಸ್ಪತ್ರೆಗಳು,ಹೋಟೆಲ್‌ಗಳು,ಕಚೇರಿಗಳು ಇತ್ಯಾದಿ ಕಡೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲೆಂದೇ ಹಲವಾರು ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ ಮತ್ತು ಈ ಪೈಕಿ ಹೆಚ್ಚಿನವರು ಮಹಿಳೆಯರೇ ಆಗಿರುತ್ತಾರೆ. ನೆಲ ಇತ್ಯಾದಿಗಳನ್ನು ಸ್ವಚ್ಛಗೊಳಿಸಲು ಬಳಸುವ ಉತ್ಪನ್ನಗಳು ಅಸ್ತಮಾವನ್ನುಂಟು ಮಾಡಬಲ್ಲ ಹಲವಾರು ಅಪಾಯಕಾರಿ ರಾಸಾಯನಿಕಗಳಿಂದ ತುಂಬಿರುತ್ತವೆ. ಈ ರಾಸಾಯನಿಕಗಳು ಪ್ರತಿಕ್ರಿಯಾತ್ಮಕವಾಗಿರುತ್ತವೆ ಮತ್ತು ಶ್ವಾಸಕೋಶಗಳ ಅಂಗಾಂಶಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತವೆ. ಆರ್ಗ್ಯಾನಿಕ್ ಕ್ಲೀನರ್‌ಗಳೂ ಒಳ್ಳೆಯವಲ್ಲ, ಏಕೆಂದರೆ ಅವು ದೀರ್ಘಕಾಲಿಕ ಉಸಿರಾಟ ಸಮಸ್ಯೆಗಳನ್ನು ಮತ್ತು ಅಲರ್ಜಿಯನ್ನುಂಟು ಮಾಡುವ ಬಾಷ್ಪಶೀಲ ಜೈವಿಕ ಸಂಯುಕ್ತಗಳನ್ನು ಬಿಡುಗಡೆಗೊಳಿಸುತ್ತವೆ.

* ಬಾರ್‌ಟೆಂಡಿಂಗ್ ಮತ್ತು ವೇಟರ್ ಉದ್ಯೋಗ

 ಹೊಗೆಯಿಂದ ತುಂಬಿದ ಸ್ಥಳಗಳಲ್ಲಿ ಕೆಲಸ ಮಾಡುವುದು ಶ್ವಾಸಕೋಶಗಳಿಗೆ ತೀತ್ರ ಹಾನಿಯನ್ನುಂಟು ಮಾಡುತ್ತದೆ. ಬಾರ್‌ಗಳಲ್ಲಿ ಧೂಮ್ರಪಾನ ಮಾಮೂಲು ಮತ್ತು ಇಂತಹ ಸ್ಥಳಗಳಲ್ಲಿ ದುಡಿಯುವವರು ಸ್ವತಃ ಧೂಮ್ರಪಾನಿಗಳಲ್ಲದಿದ್ದರೂ ಸಿಗರೇಟ್ ಅಥವಾ ಹುಕ್ಕಾಗಳಂತಹ ಸಾಧನಗಳಿಂದ ಹೊರಹೊಮ್ಮುವ ಹೊಗೆಯನ್ನು ಪರೋಕ್ಷವಾಗಿ ಸೇವಿಸುತ್ತಿರುತ್ತಾರೆ ಮತ್ತು ಇದು ಶ್ವಾಸಕೋಶ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುತ್ತದೆ.

* ಕೇಶವಿನ್ಯಾಸ ಉದ್ಯೋಗ

ಈ ಉದ್ಯೋಗದಲ್ಲಿರುವವರು ಗ್ರಾಹಕರ ಕೂದಲಿಗೆ ಬಣ್ಣ ನೀಡಲು ಅಥವಾ ಕೂದಲ ಶೈಲಿಯನ್ನು ರೂಪಿಸಲು ರಾಸಾಯನಿಕಗಳನ್ನು ಬಳಸುತ್ತಿರುತ್ತಾರೆ. ಇಂತಹ ರಾಸಾಯನಿಕಗಳ ನಿರಂತರ ಬಳಕೆಯು ಅವರ ಉಸಿರಾಟದ ಅಂಗಗಳಿಗೆ ಹಾನಿಯನ್ನುಂಟು ಮಾಡಬಲ್ಲವು ಮತ್ತು ವೃತ್ತಿಪರ ಅಸ್ತಮಾಕ್ಕೆ ಕಾರಣವಾಗಬಲ್ಲವು. ಕೂದಲನ್ನು ನೆಟ್ಟಗಾಗಿಸುವ ಹೆಚ್ಚಿನ ಉತ್ಪನ್ನಗಳು ಫಾರ್ಮಾಲ್ಡಿಹೈಡ್‌ನ್ನು ಒಳಗೊಂಡಿರುತ್ತವೆ ಮತ್ತು ಇದು ಶ್ವಾಸಕೋಶ ಕ್ಯಾನ್ಸರ್ ಮತ್ತು ಕೆರಳುವಿಕೆಗೆ ಪ್ರಮುಖ ಕಾರಣವಾಗಿದೆ.

* ಆಸ್ಪತ್ರೆಗಳು

ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ಕೆಲಸ ಮಾಡುವ ವೈದ್ಯರು,ನರ್ಸ್‌ಗಳು ಮತ್ತು ಇತರರು ಶ್ವಾಸಕೋಶ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಲೇಟೆಕ್ಸ್‌ನ್ನು ಒಳಗೊಂಡಿರುವ ಕೈ ಗವುಸುಗಳನ್ನು ಧರಿಸುವುದು ಕೆಲವರಲ್ಲಿ ಅಸ್ತಮಾವನ್ನುಂಟು ಮಾಡಬಹುದು. ಕ್ಷಯ,ಇನ್‌ಫ್ಲುಯೆಂಜಾ ಮತ್ತು ಸಾರ್ಸ್(ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್)ನಂತಹ ಶ್ವಾಸಕೋಶ ಕಾಯಿಲೆಗಳು ಆಸ್ಪತ್ರೆಗಳಲ್ಲಿ ದುಡಿಯುವವರಲ್ಲಿ ಕಾಣಿಸಿಕೊಳ್ಳುವ ಅಪಾಯವು ಹೆಚ್ಚಿರುತ್ತದೆ.

* ನಿರ್ಮಾಣ ಕ್ಷೇತ್ರ

  ಕಟ್ಟಡ ಅಥವಾ ಇತರ ನಿರ್ಮಾಣ ಕ್ಷೇತ್ರಗಳಲ್ಲಿ ದುಡಿಯುವವರು ಶ್ವಾಸಕೋಶ ಕಾಯಿಲೆಗಳಿಗೆ ಗುರಿಯಾಗುವುದು ಹೆಚ್ಚುತ್ತಿದೆ. ಅವರು ಅಸಬೆಸ್ಟಾಸ್ ಅಥವಾ ಕಲ್ನಾರು ಮತ್ತು ಇತರ ಸೂಕ್ಷ್ಮ ನಾರುಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವು ಹೆಚ್ಚುತ್ತದೆ. ಈ ಕಣಗಳು ಅಸಬೆಸ್ಟಾಸಿಸ್ ಅಥವಾ ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುತ್ತವೆ.

* ಕಾರ್ಖಾನೆಗಳು

 ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಅಸ್ತಮಾಕ್ಕೆ ಗುರಿಯಾಗುವ ಅಥವಾ ಈಗಾಗಲೇ ಇರುವ ಶ್ವಾಸಕೋಶ ಸಮಸ್ಯೆ ಇನ್ನಷ್ಟು ಹದಗೆಡುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಶ್ವಾಸಕೋಶ ಕ್ಯಾನ್ಸರ್‌ಗೂ ಗುರಿಯಾಗಬಹುದು. ಫೌಂಡ್ರಿಗಳಲ್ಲಿ ದುಡಿಯುವವರು ಸಿಲಿಕಾಸಿಸ್‌ಗೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.

* ಕೃಷಿ

ಹೊಲಗದ್ದೆಗಳಲ್ಲಿ ಬೆಳೆಗಳು ಮತ್ತು ಪ್ರಾಣಿಗಳ ಸಾಂಗತ್ಯದಲ್ಲಿರುವರು ವಿವಿಧ ಕಾಯಿಲೆಗಳಿಗೆ ಗುರಿಯಾಗುವ ಅಪಾಯಗಳನ್ನು ಎದುರಿಸುತ್ತಿರುತ್ತಾರೆ. ಮಣ್ಣಿನಿಂದ ಮಲಿನಗೊಂಡಿರುವ ಧಾನ್ಯಗಳು ಹಾಗೂ ಕರಡ ಅಥವಾ ಒಣಹುಲ್ಲುಗಳಿಗೆ ಪದೇಪದೇ ಮತ್ತು ನಿರಂತರವಾಗಿ ಒಡ್ಡಿಕೊಳ್ಳುವುದು ಹೈಪರ್‌ಸೆನ್ಸಿಟಿವಿಟಿ ನ್ಯುಮೋನಿಟಿಸ್‌ಗೆ ಕಾರಣವಾಗುತ್ತದೆ ಮತ್ತು ಇದರಿಂದ ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳು ಉರಿಯೂತಕ್ಕೊಳಗಾಗುತ್ತವೆ ಮತ್ತು ಅಂಗಾಂಶಗಳಿಗೆ ಹಾನಿಯುಂಟಾಗುತ್ತದೆ.

* ಕಲ್ಲಿದ್ದಲು ಗಣಿಗಾರಿಕೆ

 ಕಲ್ಲಿದ್ದಲು ಗಣಿಗಳಲ್ಲಿ ದುಡಿಯುವವರು ಬ್ರಾಂಕೈಟಿಸ್‌ನಿಂದ ಹಿಡಿದು ನ್ಯುಮೊಕಾನಿಯಾಸಿಸ್‌ವರೆಗೆ ಹಲವಾರು ಶ್ವಾಸಕೋಶ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನೆದುರಿಸುತ್ತಿರುತ್ತಾರೆ. ಅವರು ಉಸಿರಾಡುವ ಧೂಳು ಶ್ವಾಸಕೋಶಗಳಲ್ಲಿ ಸಂಗ್ರಹವಾಗುತ್ತದೆ ಮತ್ತು ಅಲ್ಲಿ ಗಟ್ಟಿಯಾಗುತ್ತದೆ,ಇದರಿಂದ ಉಸಿರಾಡುವುದು ಕಷ್ಟವಾಗುತ್ತದೆ ಮತ್ತು ಮಾರಣಾಂತಿಕವಾಗಬಲ್ಲ ಫೈಬ್ರೊಸಿಸ್‌ಗೆ ಕಾರಣವಾಗುತ್ತದೆ

* ಅಗ್ನಿಶಾಮಕ ಸೇವೆ

ಅಗ್ನಿಶಾಮಕ ಸೇವೆಯನ್ನು ನಿರ್ವಹಿಸುವವರು ಶ್ವಾಸಕೋಶಗಳಿಗೆ ಅಪಾಯಕಾರಿಯಾದ ಹಲವಾರು ಅಂಶಗಳಿಗೆ ತೆರೆದುಕೊಂಡಿರುತ್ತಾರೆ. ಬೆಂಕಿಯ ಜ್ವಾಲೆಗಳಿಂದ ಹಿಡಿದು ಉರಿಯುತ್ತಿರುವ ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ.

* ವಾಹನಗಳಿಗೆ ಸ್ಪ್ರೇ ಪೇಂಟಿಂಗ್

ಈ ಉದ್ಯೋಗದಲ್ಲಿ ತೊಡಗಿಕೊಂಡಿರುವವರು ವೃತ್ತಿಪರ ಅಸ್ತಮಾಕ್ಕೆ ಪ್ರಮುಖ ಕಾರಣವಾಗಿರುವ ಐಸೊಸೈನೇಟ್‌ಗಳಂತಹ ರಾಸಾಯನಿಕಗಳಿಗೆ ತೆರೆದುಕೊಂಡಿರುತ್ತಾರೆ. ಬಣ್ಣಗಳಲ್ಲಿರುವ ಪಾಲಿಯುರೆಥಾನ್ ಉತ್ಪನ್ನಗಳು ಎದೆ ಬಿಗಿತವನ್ನುಂಟು ಮಾಡುತ್ತವೆ ಮತ್ತು ಉಸಿರಾಟವನ್ನು ಕಷ್ಟಕರವಾಗಿಸುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X