ಹೂಡೆಯಲ್ಲಿ ಸ್ಕೂಲ್ ಚಲೋ ಕಾರ್ಯಕ್ರಮ

ಉಡುಪಿ, ಜೂ.11: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೂಡೆ ಘಟಕದ ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮವು ಹೂಡೆಯ ಉರ್ದು ಶಾಲೆಯಲ್ಲಿ ಸೋಮವಾರ ಜರಗಿತು.
ಈ ಸಂದರ್ಭದಲ್ಲಿ ಹೂಡೆ ಉರ್ದು ಶಾಲೆಯ 21 ಮಕ್ಕಳು ಸೇರಿದಂತೆ ವಿವಿಧ ಶಾಲೆಯ ಒಟ್ಟು 70 ಬಡ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಶಾಲಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಪಿಎಫ್‌ಐ ಉಡುಪಿ ಜಿಲ್ಲಾ ಸಮಿತಿ ದಸ್ಯ ಇಲ್ಯಾಸ್ ಹೂಡೆ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಉಪಸ್ಥಿತರಿದ್ದರು. ಇಸಾಕ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಮ್ತೀಯಾಝ್ ಹೂಡೆ ಸ್ವಾಗತಿಸಿ, ವಂದಿಸಿದರು.
Next Story





