ದ್ವಿ.ಪಿಯುಸಿ ಪೂರಕ ಪರೀಕ್ಷೆ: ಮೊದಲ ದಿನ 84 ಮಂದಿ ಗೈರು
ಉಡುಪಿ, ಜೂ.11: ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆಗಳು ಇಂದು ಪ್ರಾರಂಭಗೊಂಡಿದ್ದು, ಮೊದಲ ದಿನ ನಡೆದ ಮೂರು ಪರೀಕ್ಷೆಗಳಿಗೆ ಒಟ್ಟು 84 ಮಂದಿ ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂರು ಪರೀಕ್ಷೆಗಳಿಗೆ ಒಟ್ಟು 723 ಮಂದಿ ಹೆಸರು ನೊಂದಾಯಿಸಿ ಕೊಂಡಿದ್ದು, ಇವರಲ್ಲಿ 639 ಮಂದಿ ಪರೀಕ್ಷೆ ಬರೆದಿದ್ದಾರೆ. ಸೋಶಿಯಾಲಜಿ ಯಲ್ಲಿ 61 ಮಂದಿಯಲ್ಲಿ 11 ಮಂದಿ, ಗಣಿತ ಪರೀಕ್ಷೆಯಲ್ಲಿ 320ರಲ್ಲಿ 25 ಮಂದಿ, ಅಕೌಂಟೆನ್ಸಿಯ ಹೊಸ ಸಿಲೆಬಸ್‌ನಲ್ಲಿ 246ರಲ್ಲಿ 29 ಹಾಗೂ ಹಳೆ ಸಿಲೆಬಸ್‌ನಲ್ಲಿ 96ರಲ್ಲಿ 19 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





