ಪಾವೂರು: ಸ್ವಚ್ಛ ಮೇವ ಜಯತೆ ಜನಾಂದೋಲನಕ್ಕೆ ಚಾಲನೆ

ಮಂಗಳೂರು, ಜೂ.11: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ. ಜಿಪಂ ಸ್ವಚ್ಛ ಭಾರತ್ ಮಿಷನ್ (ಗ್ರಾ), ಮಂಗಳೂರು ತಾಲೂಕು ಪಂಚಾಯತ್ ಸಹಯೋಗದಲ್ಲಿ ಮಂಗಳವಾರ ತಾಲೂಕಿನ ಪಾವೂರು ಗ್ರಾಪಂನಲ್ಲಿ ಜಿಲ್ಲಾ ಹಂತದ ‘ಸ್ವಚ್ಛಮೇವ ಜಯತೆ’ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛತಾ ರಥಕ್ಕೆ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಚಾಲನೆ ನೀಡಿದರು. ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಂಕುಸ್ಥಾಪನೆ ಹಾಗೂ ಸ್ವಚ್ಛಮೇವ ಜಯತೆ ಜಿಲ್ಲಾ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಪಂನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಗಿಡನೆಡುವಿಕೆ ನೆರವೇರಿಸಿದರು. ಜಿಪಂ ಸಿಇಒ ಡಾ.ಸೆಲ್ವಮಣಿ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ತಾಪಂ ಇಒ ರಘು ಎ.ಇ. ಪ್ರತಿಜ್ಞಾವಿಧಿ ಬೋಧಿಸಿದರು. ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾವೂರು ಗ್ರಾಪಂ ಉಪಾಧ್ಯಕ್ಷ ವಾಮನ ಸಫಲಿಗ ಸ್ವಾಗತಿಸಿದರು. ಈ ಜನಾಂದೋಲನ ಕಾರ್ಯಕ್ರಮವು ಮಂಗಳವಾರದಿಂದ ಆರಂಭಗೊಂಡು ಜುಲೈ 10 ರವರೆಗೆ ಜಿಲ್ಲೆಯ ಎಲ್ಲ ಐದು ತಾಲೂಕುಗಳಲ್ಲಿ ಒಂದು ತಿಂಗಳ ಕಾಲ ನಡೆಯಲಿದೆ.







