ಕುವೈತ್: ಭಾರತೀಯರ ವಾಪಸಾತಿಗೆ 2 ದಿನದಲ್ಲಿ ನಿರ್ಣಯ ಸಾಧ್ಯತೆ
ಮಂಗಳೂರು, ಜೂ.11: ಕುವೈತ್‌ನಲ್ಲಿ ತೊಂದರೆಗೆ ಒಳಗಾಗಿರುವ ಭಾರತೀಯ ನೌಕರರ ಪ್ರಕರಣ ಇತ್ಯರ್ಥಗೊಳಿಸಲು ಸಂಬಂಧಿಸಿ ಪಾಮ್ (ಪಬ್ಲಿಕ್ ಅಥೋರಿಟಿ ಆಫ್ ಮ್ಯಾನ್ ಪವರ್) ಮತ್ತು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಮಂಗಳವಾರ ನಡೆಯಿತು.
ಭಾರತೀಯ ನೌಕರರ ಬಾಕಿ ವೇತನ ಮತ್ತು ತಾಯ್ನೆಲಕ್ಕೆ ವಾಪಸಾಗಲು ಅಗತ್ಯ ವ್ಯವಸ್ಥೆ ಒದಗಿಸುವ ವಿಷಯಕ್ಕೆ ಸಂಬಂಧಿಸಿ ಎರಡು ದಿನಗಳೊಳಗೆ ಪಾಮ್ ಅಧಿಕಾರಿಗಳು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇರುವುದಾಗಿ ರಾಯಭಾರಿ ಕಚೇರಿ ಮೂಲಗಳು ತಿಳಿಸಿವೆ.
ಶೋನ್‌ನಲ್ಲಿ ಸೋಮವಾರ ಸಂಜೆ ಪಾಮ್ ಮತ್ತು ಶೋನ್‌ನ ಅಧಿಕಾರಿಗಳ ಉಪಸ್ಥಿತಿಯಲ್ಲಿ ಭಾರತೀಯ ನೌಕರರ ಅಹವಾಲು ಸ್ವೀಕಾರ ಸಭೆ ಜರುಗಿತ್ತು. ಈ ಸಭೆಯಲ್ಲಿ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಉಪಸ್ಥಿತಿ ಇರಲಿಲ್ಲ.
Next Story





