ಬಂಟ್ವಾಳ: ವಿವಾಹಿತ ಮಹಿಳೆ ನಾಪತ್ತೆ
ಮಂಗಳೂರು, ಜೂ.11: ಬಂಟ್ವಾಳ ತಾಲೂಕಿನ ಬೋಳಂತೂರಿನ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದಾರೆ.
ಬೋಳಂತೂರುವಿನ ಎಸ್.ಪಿ. ಶರೀಫ್ ಎಂಬವರ ಪತ್ನಿ ಸಲೀಮಾ (27) ನಾಪತ್ತೆಯಾದ ಮಹಿಳೆ. ಶರೀಫ್ ಹಾಗೂ ಸಲೀಮಾ ಸುಮಾರು ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ. ಮದುವೆ ಬಳಿಕ ಸಲೀಮಾ ಹೆಚ್ಚಿನ ಸಮಯ ಆಕೆಯ ತಾಯಿ ಮನೆಯಲ್ಲಿ ವಾಸವಾಗಿದ್ದರು.
ಶರೀಫ್ ತಮ್ಮ ಮಕ್ಕಳೊಂದಿಗೆ ಪತ್ನಿಯನ್ನು ಭೇಟಿಯಾಗಲು ಮೇ 2ರಂದು ಆಕೆಯ ತವರುಮನೆಗೆ ತೆರಳಿದ್ದರು. ಈ ವೇಳೆ ಪತ್ನಿ ಸಲೀಮಾ ಮನೆಯಲ್ಲಿರಲಿಲ್ಲ. ಅತ್ತೆಯನ್ನು ಪ್ರಶ್ನಿಸಿದಾಗ ಪತ್ನಿಯು ಒಂದು ತಿಂಗಳ ಹಿಂದೆಯೇ ಮನೆಬಿಟ್ಟು ಹೋಗಿರುವುದಾಗಿ ತಿಳಿಸಿದ್ದಾರೆ.
ಶರೀಫ್ ಅವರು ಸಂಬಂಧಿಕರ ಮನೆ, ಸುತ್ತಮುತ್ತ ವಿಚಾರಿಸಿದರೂ ಪತ್ನಿ ಪತ್ತೆಯಾಗಿಲ್ಲ. ಈತನಕ ಹುಡುಕಾಡಿದರೂ ಪತ್ನಿ ಕಾಣದೇ ಇದ್ದ ಕಾರಣ ಅಂತಿಮವಾಗಿ ಠಾಣೆಗೆ ದೂರು ನೀಡಲು ತಡವಾಗಿದೆ.
ಚಹರೆ: 5 ಅಡಿ ಎತ್ತರ, ಬಿಳಿ ಮೈಬಣ್ಣ, ನೀಲಿ ಬಣ್ಣದ ಚೂಡಿದಾರ ಧರಸಿದ್ದರು. ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಿ ಮಾತನಾಡುತ್ತಾರೆ. ನಾಪತ್ತೆಯಾದ ಮಹಿಳೆಯ ಗುರುತು ಸಿಕ್ಕಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆ (0824-2220518, 9480805346)ಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.







