ಹಾಸನ: ಅನುಮಾನಸ್ಪದ ರೀತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಹಾಸನ, ಜೂ.13: ನಗರದ ಹೊಸ ಬಸ್ ನಿಲ್ದಾಣಕ್ಕೆ ಹಾದು ಹೋಗುವ ರೈಲ್ವೆ ಗೇಟ್ ಬಳಿ ಅನುಮಾನಸ್ಪದ ರೀತಿಯಲ್ಲಿ ಅಪರಿಚಿತ ಮಹಿಳೆಯೋರ್ವರ ಶವ ಪತ್ತೆಯಾಗಿದೆ.
ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಹಾದು ಹೋಗುವ ರೈಲ್ವೆ ಗೇಟ್ ಬಲಭಾಗದ ಸಲ್ಪ ದೂರದಲ್ಲಿ ರೈಲ್ವೆ ಹಳಿ ಮೇಲೆ ಅಂದಾಜು 55 ರಿಂದ 60 ವರ್ಷ ಒಳಗಿನ ಮಹಿಳೆಯ ಶವ ಪತ್ತೆಯಾಗಿದೆ.
ಈಕೆಯ ಹಣೆ, ಇತರೆ ಭಾಗಗಳಲ್ಲಿ ಹೊಡೆದ ಕೆಲ ಗುರುತುಗಳು ಕಂಡು ಬಂದಿದೆ. ಆಕೆಯ ಕುತ್ತಿಗೆ, ಕಿವಿ, ಹಾಗೂ ಕಾಲಲ್ಲಿ ಯಾವುದೇ ಒಡವೆಗಳು ಪತ್ತೆಯಾಗಿಲ್ಲ. ಈಕೆಯ ಬಳಿ ಬೆಂಗಳೂರು-ಹಾಸನ ಟಿಕೆಟ್ ದೊರಕಿದ್ದು, ಯಾರೋ ದುಷ್ಕರ್ಮಿಗಳು ಈಕೆಯನ್ನು ಹಿಂಬಾಲಿಸಿ ಆಕೆಯ ಬಳಿ ಇದ್ದ ಒಡವೆಗಳನ್ನು ದೋಚಿ ಕೊಲೆ ಕೃತ್ಯ ಎಸಗಿರಬಹುದು, ಇಲ್ಲವೇ ಮೊದಲೇ ಕೃತ್ಯ ಎಸಗಿ ನಂತರ ರೈಲ್ವೆ ಹಳಿ ಮೇಲೆ ಇಟ್ಟು ಪರಾರಿಯಾಗಿರಬಹುದು ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಾಗಿದೆ.
Next Story