ಸುಂಟಿಕೊಪ್ಪ: ಶಿಹಾಬ್ ತಂಙಳ್ ಜಾಮಿಅ ಜೂನಿಯರ್ ಕಾಲೇಜು ತರಗತಿ ಆರಂಭ
ಮಡಿಕೇರಿ, ಜೂ.13 : ಸುಂಟಿಕೊಪ್ಪ ಮಹಮ್ಮದ್ ಅಲಿ ಶಿಹಾಬ್ ತಂಙಳ್ ಜಾಮಿಅ ಜೂನಿಯರ್ ಕಾಲೇಜಿನ ಪ್ರಸಕ್ತ ಸಾಲಿನ ಅಧ್ಯಯನ ತರಗತಿ ಕೇಂದ್ರವು ಪ್ರಾರಂಭವಾಯಿತು.
ಕಾಲೇಜಿನ ಸಭಾಂಗಣದಲ್ಲಿ ಸಂಸ್ಥಾಪಕ ಕೆ.ಎ.ಇಬ್ರಾಹಿಂ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿರುವ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅಧ್ಯಯನ ತರಗತಿಗೆ ಚಾಲನೆ ನೀಡಿದರು.
ಈ ಸಂದರ್ಭ ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಬಹು.ಎಂ.ಎಂ ಅಬ್ದುಲ್ಲ ಫೈಝಿ, ಕಾಲೇಜು ಆಡಳಿತ ಸಮಿತಿ ಕಾರ್ಯದರ್ಶಿ ಸಿ.ಎಂ ಹಮೀದ್ ಮೌಲವಿ, ಅಧ್ಯಕ್ಷ ವೈ.ಎಂ ಉಮರ್ ಫೈಝಿ ಹಾಗೂ ಸದಸ್ಯರಾದ ತಮ್ಲೀಖ್ ದಾರಿಮಿ, ಆರಿಫ್ ಫೈಝಿ, ಇಖ್ಬಾಲ್ ಮೌಲವಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Next Story