ಜೂ.17: ಬೋಧನಾಂಗ ಪ್ರೇರಣಾ ಕಾರ್ಯಕ್ರಮ
ಮಂಗಳೂರು, ಜೂ.14: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಮತ್ತು ಸಿಪಿಇ ಕೋಶ, ಟುವರ್ಡ್ಸ್ ಇನ್‌ಕ್ಲೂಸಿವ್ ಎಜುಕೇಶನ್ ಎಂಬ ಬೋಧನಾಂಗ ಪ್ರೇರಣಾ ಕಾರ್ಯಕ್ರಮ ಕಾಲೇಜಿನ ಡಾ.ಶಿವರಾಮಕಾರಂತ ಸಭಾಭವನದಲ್ಲಿ ಜೂ.17ರಂದು ಪೂರ್ವಾಹ್ನ10ಕ್ಕೆ ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಖ್ಯಾತ ಮಾನಸಿಕ ಆರೋಗ್ಯ ಸಲಹೆಗಾರ್ತಿ ಡಾ.ರೊಮಿಲಾ ಶೇಖರ್ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಯೋಗ ವಿಜ್ಞಾನ ವಿಭಾಗದ ಡಾ. ಅಜಿತೇಶ್ ಭಟ್‌ಎನ್. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





