ಕೋಯನಗರದಲ್ಲಿ ಮದ್ರಸ ಪ್ರಾರಂಭೋತ್ಸವ

ನಾವುಂದ, ಜೂ.15: ಕೋಯನಗರ ಬುಸ್ತಾನುಲ್ ಉಲೂಂ ಮದ್ರಸದ 2019-20ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ‘ಫತ್‌ಹೇ ಮುಬಾರಕ್’ ಕಾರ್ಯಕ್ರಮವು ಇತ್ತೀಚೆಗೆ ಕೋಯನಗರ ಅಲ್-ಬುಸ್ತಾನ್ ಸಭಾಂಗಣ ನಡೆಯಿತು.
ಕೋಯನಗರ ಮೊಹಲ್ಲಾ ಅಧ್ಯಕ್ಷ ಇರ್ಷಾದ್ ಟಿ.ಎಂ.ಸಿ. ಅಧ್ಯಕ್ಷತೆ ವಹಿಸಿ ದ್ದರು. ಕಾರ್ಯಕ್ರಮವನ್ನು ಅಧ್ಯಾಪಕ ಮುನೀರ್ ಸಖಾಫಿ ಸುಳ್ಯ ಉದ್ಘಾಟಿಸಿ ಶುಭ ಹಾರೈಸಿದರು. ಮದ್ರಸ ಮುಖ್ಯೋಪಾಧ್ಯಾಯ ಕೊಂಬಾಳಿ ಕೆ.ಎಂ.ಎಚ್. ಝುುರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ಎಂಎ ನಾವುಂದ ಅಧ್ಯಕ್ಷ ಜಿ.ಎಂ.ಸತ್ತಾರ್, ನಾವುಂದ ಜಮಾಅತ್ ಕಮಿಟಿ ಸದಸ್ಯ ಬಿ.ಎಂ.ಹಂಝ, ಎಸ್‌ವೈಎಸ್ ಕೋಯನಗರ ಶಾಖಾಧ್ಯಕ್ಷ ಮುಹಮ್ಮದಾಲಿ ಹಾಜಿ, ಮೊಹಲ್ಲಾ ಮುಖಂಡರಾದ ಇಸ್ಮಾಯಿಲ್ ಮರ ವಂತೆ, ಖಾದರ್ ಉಪ್ಪುಂದ, ಖಾಸಿಂ ಕೋಯನಗರ, ಅಹ್ಮದ್ ಕೆ.ಎಂ. ಮೊದ ಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಅಬ್ದುಲ್ ಹಮೀದ್ ಮದನಿ ಮಾವಿನಕಟ್ಟೆ, ಹಸೈನಾರ್ ಮುಸ್ಲಿ ಯಾರ್ ಬೈಂದೂರು ಮೌಲೀದ್ ಪಾರಾಯಣದ ನೇತೃತ್ವ ವಹಿಸಿದ್ದರು. ಕೋಯನಗರ ಮೊಹಲ್ಲಾ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ವಂದಿಸಿದರು.