ಒಪ್ಪಂದ ಬದ್ಧತೆಯಿಂದ ದೂರ: ಇರಾನ್ ಎಚ್ಚರಿಕೆ
ದುಶಾಂಬೆ, ಜೂ. 15: ಪರಮಾಣು ಒಪ್ಪಂದಕ್ಕೆ ಸಹಿ ಹಾಕಿರುವ ಇತರ ದೇಶಗಳು ‘ಧನಾತ್ಮಕ ಸಂಕೇತ’ಗಳನ್ನು ನೀಡದಿದ್ದರೆ, ಒಪ್ಪಂದದ ಬದ್ಧತೆಯಿಂದ ದೂರ ಸರಿಯುವುದನ್ನು ಇರಾನ್ ಮುಂದುವರಿಸುತ್ತದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಶನಿವಾರ ಹೇಳಿದ್ದಾರೆ.
2015ರಲ್ಲಿ ಇರಾನ್ ಜಾಗತಿಕ ಶಕ್ತಿಗಳೊಂದಿಗೆ ನಡೆಸಿರುವ ಒಪ್ಪಂದದಿಂದ ಅಮೆರಿಕ ಕಳೆದ ವರ್ಷ ಹಿಂದೆ ಬಂದಿರುವುದನ್ನು ಸ್ಮರಿಸಬಹುದಾಗಿದೆ.
ಅದೇ ವೇಳೆ, ಒಪ್ಪಂದದ ಕೆಲವು ಬಾಧ್ಯತೆಗಳಿಂದ ಇರಾನ್ ಮೇ ತಿಂಗಳಲ್ಲಿ ದೂರ ಸರಿದಿರುವುದನ್ನೂ ಸ್ಮರಿಸಬಹುದಾಗಿದೆ.
Next Story