ತನ್ನ ಪ್ರಮಾಣವಚನ ಸಂದರ್ಭ 'ಜೈ ಶ್ರೀ ರಾಮ್' ಕೂಗಿದ ಬಿಜೆಪಿ ಸಂಸದರಿಗೆ ಉವೈಸಿ ಪ್ರತಿಕ್ರಿಯೆ ಏನು ಗೊತ್ತೇ?

ಹೊಸದಿಲ್ಲಿ : ಹೈದರಾಬಾದ್ ನಿಂದ ಲೋಕಸಭೆಗೆ ಚುನಾಯಿತರಾದ ಎಐಎಂಐಎಂ ಅಧ್ಯಕ್ಷ ಅಸಾಸುದ್ದೀನ್ ಉವೈಸಿ ಮಂಗಳವಾರ ಸಂಸತ್ತಿನಲ್ಲಿ ಪ್ರಮಾಣವಚನ ಸ್ವೀಕರಿಸಿದಾಗ ಬಿಜೆಪಿ ಸಂಸದರು "ಜೈ ಶ್ರೀ ರಾಮ್'' ಹಾಗೂ "ವಂದೇ ಮಾತರಂ'' ಘೋಷಣೆಗಳನ್ನು ಕೂಗಿದರು. ಉವೈಸಿ ತಮ್ಮ ಸ್ಥಾನದಿಂದ ಪ್ರಮಾಣವಚನ ಸ್ವೀಕಾರ ನಡೆಯುವ ಸ್ಥಳದತ್ತ ನಡೆಯಲಾರಂಭಿಸಿದಾಗಲೇ ಘೋಷಣೆಗಳು ಮೊಳಗಲಾರಂಭಿಸಿದಾಗ ಘೋಷಣೆ ಕೂಗುತ್ತಿರುವವರನ್ನು ನೀವು ಮಾಡುತ್ತಿರುವುದನ್ನು ಮುಂದುವರಿಸಿ ಎಂದು ಉವೈಸಿ ಹೇಳಿದರು. ಈ ಘೋಷಣೆಗಳಿಗೆ ಪ್ರತಿಯಾಗಿ ತಮ್ಮ ಪ್ರಮಾಣವಚನ ಸ್ವೀಕಾರ ಮುಗಿದ ಕೂಡಲೇ ಉವೈಸಿ "ಜೈ ಭೀಮ್, ಜೈ ಭೀಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್'' ಎಂದರು.
ಉವೈಸಿ ಪ್ರಮಾಣ ವಚನ ಸ್ವೀಕಾರದ ನಂತರ "ಜೈ ಶ್ರೀ ರಾಮ್'' "ವಂದೇ ಮಾತರಂ'' ಘೋಷಣೆಗಳು ನಿಂತು "ಭಾರತ್ ಮಾತಾ ಕಿ ಜೈ'' ಘೋಷಣೆಯನ್ನು ಬಿಜೆಪಿ ಸಂಸದರು ಕೂಗಲಾರಂಭಿಸಿದ್ದರು.
ನಂತರ ಸಂಸತ್ತಿನ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಉವೈಸಿ "ನನ್ನನ್ನು ನೋಡಿದಾಗ ಅವರಿಗೆ ಇಂತಹ ವಿಚಾರಗಳು ನೆನಪಿಗೆ ಬರುತ್ತಿರುವುದು ಖುಷಿಯಾಗಿದೆ, ಅವರಿಗೆ ಸಂವಿಧಾನ ಹಾಗೂ ಮುಝಫ್ಫರಪುರ್ ನಲ್ಲಿನ ಮಕ್ಕಳ ಸಾವು ಪ್ರಕರಣಗಳೂ ನೆನಪಾಗುವುದು ಎಂದು ನಿರೀಕ್ಷಿಸುತ್ತೇನೆ,'' ಎಂದರು.
Hyderabad AIMIM MP Barrister @asadowaisi takes oath in Lok Sabha. pic.twitter.com/objAfetEu6
— AIMIM Official (@aimim_national) June 18, 2019







