Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ತಡರಾತ್ರಿಯ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ...

ತಡರಾತ್ರಿಯ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ18 Jun 2019 6:37 PM IST
share
ತಡರಾತ್ರಿಯ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ ಗೊತ್ತೇ?

ಸಮತೋಲಿತ ದೇಹತೂಕ ಮತ್ತು ಜೀರ್ಣಾಂಗದ ಆರೋಗ್ಯಕ್ಕಾಗಿ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಅಗತ್ಯವಾಗಿದೆ. ತಡರಾತ್ರಿ ಊಟ ಮಾಡುವುದರಿಂದ ತೂಕ ಹೆಚ್ಚುವುದು ಮಾತ್ರವಲ್ಲ,ಶರೀರದ ಮೇಲೆ ಇತರ ಅಡ್ಡಪರಿಣಾಮಗಳನ್ನೂ ಉಂಟು ಮಾಡುತ್ತದೆ.

ರಾತ್ರಿಯ ಊಟವು ದಿನದಲ್ಲಿಯ ಅತ್ಯಂತ ಮುಖ್ಯವಾದ ಆಹಾರವಾಗಿದೆ. ದಿನವು ಸುಗಮವಾಗಿ ಸಾಗಲು ಬೆಳಗಿನ ತಿಂಡಿ ಎಷ್ಟು ಮುಖ್ಯವಾಗಿದೆಯೋ ರಾತ್ರಿಯ ಊಟವೂ ಆರೋಗ್ಯಕರ ಜೀರ್ಣಾಂಗಕ್ಕೆ ಅಷ್ಟೇ ಮುಖ್ಯವಾಗಿದೆ. ಆರೋಗ್ಯಕರ ಚಯಾಪಚಯ ಮತ್ತು ಶರೀರದ ತೂಕವನ್ನು ಕಾಯ್ದುಕೊಳ್ಳಲು ರಾತ್ರಿಯಿಡೀ ನಮಗೆ ಹಸಿವು ಕಾಡದಂತೆ ಮತ್ತು ಪೋಷಣೆಗೆ ರಾತ್ರಿಯ ಊಟವು ಮುಖ್ಯವಾಗಿದೆ. ನಾವು ಏನನ್ನು ತಿನ್ನುತ್ತೇವೆ ಎನ್ನುವುದರಿಂದ ಹಿಡಿದು ನಾವು ಊಟವನ್ನು ಎಷ್ಟು ಹೊತ್ತಿಗೆ ಮಾಡುತ್ತೇವೆ ಎನ್ನುವವರೆಗೆ ರಾತ್ರಿಯ ಊಟಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳಿವೆ.

ನಮ್ಮ ಶರೀರವು ದಿನವಿಡೀ,ನಾವೂ ನಿದ್ರಿಸುತ್ತಿದ್ದಾಗಲೂ ಸಹ ಕ್ಯಾಲರಿಗಳನ್ನು ದಹಿಸುತ್ತಲೇ ಇರುತ್ತದೆ. ಸಾಕಷ್ಟು ನಿದ್ರೆಯು ಆರೋಗ್ಯಕರ ಆಹಾರದೊಂದಿಗೆ ತಳುಕು ಹಾಕಿಕೊಂಡಿದೆ. ರಾತ್ರಿಯಲ್ಲಿ ಹಸಿವೆಯಿಂದಿರುವುದು ನಿದ್ರೆಯ ಸ್ವರೂಪದಲ್ಲಿ ವ್ಯತ್ಯಯದ ಅಡ್ಡಪರಿಣಾಮಗಳಿಗೆ ಕಾರಣವಾಗಬಲ್ಲದು.ರಾತ್ರಿಯ ಊಟ ಆರೋಗ್ಯಕರವಾಗಿರಬೇಕಿದ್ದರೆ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅಂತಹ ಕೆಲವು ಕ್ರಮಗಳು ಇಲ್ಲಿವೆ....

  ಊಟದಲ್ಲಿ ಕಾರ್ಬೊಹೈಡ್ರೇಟ್‌ಗಳು ಮತ್ತು ಎಣ್ಣೆಯ ಪ್ರಮಾಣ ಕಡಿಮೆಯಿರಲಿ. ಅರಿಷಿಣ,ಶುಂಠಿ ಮತ್ತು ದಾಲ್ಚಿನ್ನಿಯಂತಹ ಸಂಬಾರ ವಸ್ತುಗಳು ಶರೀರದಲ್ಲಿ ಕೊಬ್ಬನ್ನು ಕರಗಿಸಲು ನೆರವಾಗುವುದರಿಂದ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳಿ. ಊಟದಲ್ಲಿ ಕೊಬ್ಬು ಮತ್ತು ಚೀಸ್ ಪ್ರಮಾಣವನ್ನು ಕಡಿಮೆ ಮಾಡಿ. ಕೆಲವು ಹನಿ ತುಪ್ಪ ಅಥವಾ ಆಲಿವ್ ಎಣ್ಣೆ ಕೊಬ್ಬಿನ ಅತ್ಯುತ್ತಮ ರೂಪವಾಗಿದೆ ಮತ್ತು ಊಟಕ್ಕೆ ಸ್ವಾದವನ್ನೂ ನೀಡುತ್ತದೆ. ನಿಮ್ಮ ಊಟದಲ್ಲಿ ನಾರು ಮತ್ತು ಇಡಿಯ ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿರಲಿ. ನೀವು ಎಷ್ಟು ಊಟ ಮಾಡುತ್ತೀರಿ ಎನ್ನುವುದರ ಮೇಲೆ ಗಮನವಿರಲಿ. ರಾತ್ರಿ ಮಲಗುವ 2-3 ಗಂಟೆಗಳ ಮೊದಲು ಊಟವನ್ನು ಮಾಡುವುದು ಅತ್ಯಂತ ಮುಖ್ಯ ಎನ್ನುವುದು ಗೊತ್ತಿರಲಿ.

   ಊಟದ ಸಮಯವು ವ್ಯಕ್ತಿಯ ದಿನಚರಿ ಮತ್ತು ಜೀವನಶೈಲಿಗೆ ಅನುಗುಣವಾಗಿರಬೇಕು. ತಮ್ಮ ದಿನವನ್ನು ಬೆಳಿಗ್ಗೆ ಬೇಗನೆ ಆರಂಭಿಸುವವರು ತಮ್ಮ ಆಹಾರ ಸೇವನೆಯು ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಲು ಪೂರಕವಾದ ರೀತಿಯಲ್ಲಿ ತಮ್ಮ ಊಟದ ಸಮಯಗಳನ್ನು ನಿರ್ಧರಿಸಿಕೊಳ್ಳಬೇಕು. ನಿಮ್ಮ ಊಟದ ಯೋಜನೆಯು ನಿಮ್ಮ ನಿದ್ರೆಯ ಸಮಯಕ್ಕೆ ಅನುಗುಣವಾಗಿರಲಿ. ರಾತ್ರಿ ಹಾಸಿಗೆಗೆ ಶರಣಾಗುವ ಕನಿಷ್ಠ 2-3 ಗಂಟೆ ಮೊದಲು ಊಟ ಮಾಡುವುದು ಅಪೇಕ್ಷಣೀಯವಾಗಿದೆ. ಏಕೆಂದರೆ ನಾವು ಸೇವಿಸಿದ ಆಹಾರವು ಜೀರ್ಣಗೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಊಟವಾದ ಕೆಲವೇ ನಿಮಿಷಗಳಲ್ಲಿ ನಿದ್ರಿಸುವುದು ಶರೀರದಲ್ಲಿ ಕೊಬ್ಬಿನ ಸಂಗ್ರಹ ಮತ್ತು ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆರೋಗ್ಯಕರ ಚಯಾಪಚಯ ಮತ್ತು ತೂಕ ನಿರ್ವಹಣೆಗಾಗಿ ಕೆಲವು ಸೂತ್ರಗಳನ್ನು ಪಾಲಿಸಬಹುದು.

ನಿಮ್ಮ ಹಸಿವಿನ ಚಕ್ರಕ್ಕೆ ಅನುಗುಣವಾಗಿ ಊಟದ ಸಮಯವನ್ನು ನಿರ್ಧರಿಸಿಕೊಳ್ಳಿ. ನಿಮಗೆ ಹಸಿವಾಗುತ್ತಿದೆ ಎಂದು ಅನ್ನಿಸಿದಾಗಲೇ ಊಟ ಮಾಡಿ. ನೀವು ಹಸಿದಿರುವಾಗ ಊಟ ಮಾಡಿದರೆ ಶರೀರವು ಎಲ್ಲ ಆಹಾರವನ್ನು ಕ್ಯಾಲರಿಗಳಿಗೆ ಅನುಗುಣವಾಗಿ ಸಂಗ್ರಹಿಸಿಕೊಳ್ಳುತ್ತದೆ. ಹಸಿವೆಯಿಲ್ಲದೆ ಊಟ ಮಾಡಿದರೆ ಅದು ಶರೀರದಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಕಾರಣವಾಗುತ್ತದೆ.

ಸಮಯಕ್ಕೆ ಒತ್ತು ನೀಡುವುದಕ್ಕಿಂತ ನೀವು ಏನನ್ನು ತಿನ್ನುತ್ತಿದ್ದೀರಿ ಎನ್ನುವುದು ಮುಖ್ಯವಾಗಿರುವುದರಿಂದ ಅದರ ಮೇಲೆ ಗಮನವಿರಲಿ. ಎಲ್ಲ ಅಗತ್ಯ ಪೋಷಕಾಂಶಗಳಿರುವ ಲಘು ಊಟಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ.

ನೀವು ತಡರಾತ್ರಿಗಳಲ್ಲಿ ಊಟ ಮಾಡುತ್ತಿದ್ದರೂ ಅದು ಪ್ರೋಟಿನ್ ಆಧರಿತವಾಗಿರುವಂತೆ ನೋಡಿಕೊಳ್ಳಿ. ಬದಾಮನಂತಹ ಡ್ರೈಫ್ರೂಟ್‌ಗಳು,ಮೊಸರು ಮತ್ತು ಚೀಸ್‌ನ್ನು ನೀವು ಊಟದಲ್ಲಿ ಸೇರಿಸಿಕೊಳ್ಳಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X