ಮನೆಗೆ ನುಗ್ಗಿ ನಗ ನಗದು ಕಳವು
ಕುಂದಾಪುರ, ಜೂ.19: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಬಸ್ರೂರು ಕೊಳ್ಕೆರೆ ಎಂಬಲ್ಲಿ ಜೂ.17ರಂದು ಬೆಳಗ್ಗೆ ನಡೆದಿದೆ.
ಮಹಾಲಿಂಗ ಎಂಬವರ ಮನೆಯ ಮಾಡಿನ ಹಂಚನ್ನು ತೆಗೆದು ಒಳಗೆ ನುಗ್ಗಿದ ಕಳ್ಳರು ಗೋದ್ರೇಜ್ನಲ್ಲಿ ಇರಿಸಿದ 1,20,000 ರೂ. ನಗದು, ಚಿನ್ನದ ಕರಿಮಣಿ, ಬೆಂಡೋಲೆ, ಚಿನ್ನದ ಮೂಗು ಬೊಟ್ಟು, ಚಿನ್ನದ ಓಲೆಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯದ 2ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story