ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಹುದ್ದೆಯಿಂದ ಹಿಂದೆ ಸರಿದ ಶಾನಹನ್
ವಾಶಿಂಗ್ಟನ್, ಜೂ. 19: ಅಮೆರಿಕದ ಉಸ್ತುವಾರಿ ರಕ್ಷಣಾ ಕಾರ್ಯದರ್ಶಿ ಪ್ಯಾಟ್ರಿಕ್ ಶಾನಹನ್‌ರ ಕುಟುಂಬದಲ್ಲಿ ಗೃಹ ಹಿಂಸೆ ನಡೆದಿದೆ ಎಂಬ ಕುರಿತ ವರದಿಗಳು ಪ್ರಕಟಗೊಂಡ ಬೆನ್ನಿಗೇ, ರಕ್ಷಣಾ ಕಾರ್ಯದರ್ಶಿ ಹುದ್ದೆಯ ಆಕಾಂಕೆಯನ್ನು ಅವರು ತೊರೆದಿದ್ದಾರೆ.
ಇದರೊಂದಿಗೆ ಇರಾನ್ ಮತ್ತು ಅಮೆರಿಕಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಂತದಲ್ಲೇ ಅಮೆರಿಕ ಸೇನೆಯ ನಾಯಕತ್ವದಲ್ಲಿ ಅನಿಶ್ಚಿತತೆ ಉಂಟಾಗಿದೆ.
‘‘ತುಂಬಾ ಹಿಂದಿನ ಅತ್ಯಂತ ವೈಯಕ್ತಿಕ ಹಾಗೂ ನೋವಿನ ಕೌಟುಂಬಿಕ ಪರಿಸ್ಥಿತಿಯೊಂದನ್ನು ಎಳೆದು ತರಲಾಗುತ್ತಿರುವುದು ದುರದೃಷ್ಟಕರ’’ ಎಂದು ಬೋಯಿಂಗ್ ಕಂಪೆನಿಯ ಮಾಜಿ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಶಾನಹನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story