ಮಂಗಳೂರು: ಜೂ. 25ರಂದು ಹಜ್ಜ್ ಪ್ರಾಯೋಗಿಕ ಕ್ಲಾಸ್
ಮಂಗಳೂರು : ಪೈಝೀಝ್ ಅಸೋಸಿಯೇಷನ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಜೂ. 25 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ಹಜ್ಜ್ ಪ್ರಾಯೋಗಿಕ ಕ್ಲಾಸ್ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಪೈಝೀಝ್ ಅಸೋಸಿಯೇಷನ್ ಜಿಲ್ಲಾಧ್ಶಕ್ಷ ಅಬ್ದುರ್ರಹ್ಮಾನ್ ಪೈಝಿ ವಹಿಸಲಿದ್ದು, ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಖ್ಯಾತ ವಾಗ್ಮಿ ಉಸ್ತಾದ್ ಅಬ್ದುಸ್ಸಮದ್ ಪೂಕೊಟೂರು ಅವರು ಹಜ್ಜ್ ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ. ಸ್ರೀಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆಯೆಂದು ಪೈಝೀಝ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಪೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story