ಉಡುಪಿ: ಸಿಡಿಲು ಬಡಿದು ಇಬ್ಬರಿಗೆ ಗಾಯ
ಉಡುಪಿ, ಜೂ.20: ಜಿಲ್ಲೆಯ ಬೈಂದೂರು ತಾಲೂಕು ಜಡ್ಕಲ್ ಹಾಗೂ ಕಾಪು ತಾಲೂಕು ಉಳಿಯಾರಗೋಳಿ ಗ್ರಾಮಗಳಲ್ಲಿ ನಿನ್ನೆ ರಾತ್ರಿ ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದೆಯಲ್ಲದೇ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ ಎಂದು ವರದಿಗಳು ಬಂದಿವೆ.
ಉಳಿಯಾರಗೋಳಿ ಗ್ರಾಮಗ ಗಣೇಶ್ ರಾವ್ ಕೈಪುಂಜಾಲು ಇವರ ವಾಸ್ತವ್ಯದ ಪಕ್ಕಾ ಮನೆಗೆ ಸಿಡಿಲು ಬಡಿದಿದ್ದು ಸುಮಾರು 80,000 ರೂ.ಗಳಷ್ಟು ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿವೆ. ಅಲ್ಲದೇ ಮನೆಯಲ್ಲಿದ್ದ ಒಬ್ಬರಿಗೆ ಗಾಯಗಳಾಗಿವೆ.
ಬೈಂದೂರು ತಾಲೂಕು ಜಡ್ಕಲ್ ಗ್ರಾಮದಲ್ಲೂ ಮನೆಯೊಂದಕ್ಕೆ ಸಿಡಿಲು ಬಡಿದಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಕಂಟ್ರೋಲ್ ರೂಮಿನ ಮಾಹಿತಿ ತಿಳಿಸಿದೆ. ಅಲ್ಲದೇ ಕಾಪು ತಾಲೂಕು ಕಳತ್ತೂರು ಗ್ರಾಮದ ಚಂದ್ರನಗರದ ಎಂಬಲಲಿರುವ ಅನ್ನಾ ಮಾರ್ಗರೇಟ್ ಎಂಬವರ ಮನೆ ಗಾಳಿ-ಮಳೆಗೆ ಹಾನಿಗೊಂಡಿದ್ದು, 30,000 ರೂ.ನಷ್ಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
Next Story





