ಅಡ್ಡೂರು: ಎಸ್ಡಿಪಿಐ ಸಂಸ್ಥಾಪನ ದಿನಾಚರಣೆ
ಅಡ್ಡೂರು, ಜೂ.21: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಡೂರು ವಲಯ ವತಿಯಿಂದ ಸಂಸ್ಥಾಪನ ದಿನವನ್ನು ಶುಕ್ರವಾರ ಇಲ್ಲಿನ ಪಕ್ಷದ ಕಚೇರಿ ಎದುರು ಆಚರಿಸಲಾಯಿತು.
ಎಸ್ಡಿಪಿಐ ವಲಯ ಅಧ್ಯಕ್ಷ ಎ.ಕೆ.ಮುಸ್ತಫಾ ಧ್ವಜಾರೋಹಣ ನೆರವೇರಿಸಿದರು. ಅಶ್ರಫ್ ನಡುಗುಡ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವಾ, ಪಿಎಫ್ಐ ಘಟಕಾಧ್ಯಕ್ಷ ಹಕೀಂ ಪಾಂಡೇಲ್, ಅಬೂಬಕ್ಕರ್ ನಂದ್ಯ, ಜಿ.ಎ.ಮೊಹಮ್ಮದ್,ಪುತ್ತುಮೋನು ನಡುಗುಡ್ಡೆ, ಎ.ಎಸ್.ಆಲಿಯಬ್ಬಾ, ಹಮ್ಮಬ್ಬಾ ರೈಫಲ್, ಮುಹಿಯುದ್ದೀನ್ ಗುತ್ತು, ಖಾಸಿಂ ಪ್ಯಾರ ಮತ್ತಿತರರು ಉಪಸ್ಥಿತರಿದ್ದರು.
ಶರೀಫ್ ಗೋಳಿಪಡ್ಪು ಸ್ವಾಗತಿಸಿದರು. ಅಸ್ತಾರ್ ಅಡ್ಡೂರು ವಂದಿಸಿದರು.
ಕಾರ್ಯಕ್ರಮದ ಬಳಿಕ ಎಸ್ಡಿಪಿಐ ಕಾರ್ಯಕರ್ತರು ಅಗರ್, ಟಿಪ್ಪುನಗರದಲ್ಲಿ ಶ್ರಮದಾನ ಮೂಲಕ ರಸ್ತೆ ದುರಸ್ತಿಗೊಳಿಸಿದರು.